ನಂಜನಗೂಡು: ಕಳೆದ ಒಂದು ವರ್ಷಗಳ ಹಿಂದೆ ನಂಜನಗೂಡಿನ ಕಲ್ಲಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ನೆಸ್ಲೆ ಕಾರ್ಖಾನೆಯಲ್ಲಿ ಬಾಯ್ಲರ್ ನೀರು ಸ್ಫೋಟಗೊಂಡು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ನಂಜನಗೂಡು ತಾಲ್ಲೂಕಿನ ವರುಣಾ ವಿಧಾನಸಭಾ ಕ್ಷೇತ್ರದ ಹದಿನಾರು ಮೊಳೆ ಗ್ರಾಮದ ಚಂದ್ರು ಎಂಬ ಕಾರ್ಮಿಕನ ದೇಹದ ಬಲ ಭಾಗ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.
ಗಂಭೀರವಾಗಿ ಗಾಯಗೊಂಡ ಕಾರ್ಮಿಕನನ್ನು ಮೈಸೂರಿನ ಖಾಸಗಿ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕಾರ್ಮಿಕನ ದೇಹವನ್ನು ಸರ್ಜರಿ ಮಾಡಿದ ಮಾಡಿದ ಪರಿಣಾಮ ಇನ್ನು ಗಂಭೀರ ಸ್ಥಿತಿಯಲ್ಲಿ ಕಾರ್ಮಿಕ ನರಳಾಡುತ್ತಿದ್ದಾನೆ. ಕುಟುಂಬ ನಿರ್ವಹಣೆ ತುಂಬಾ ಕಷ್ಟಕರವಾಗಿರುವ ದೆಸೆಯಿಂದ ಗಂಭೀರ ಗಾಯಗೊಂಡಿರುವ ಕಾರ್ಮಿಕ ಚಂದ್ರು ಎಂಬಾತನ ಪತ್ನಿಗೆ ನೆಸ್ಲೆ ಕಾರ್ಖಾನೆಯಲ್ಲಿ ಖಾಯಂ ಹುದ್ದೆ ನೀಡಬೇಕು ಎಂದು ಬೇಡಿಕೆ ಇಡಲಾಗಿತ್ತು.
ನೆಸ್ಲೆ ಕಾರ್ಖಾನೆಯ ಸಿಬ್ಬಂದಿಗಳು ಖಾಯಂ ಹುದ್ದೆ ನೀಡುತ್ತೇವೆ ಎಂದು ಒಂದು ವರ್ಷಗಳ ಕಾಲ ಇಂದು ನಾಳೆ ಎಂದು ದಿನ ದುಡುತ್ತಿದ್ದಾರೆ. ಕಾರ್ಖಾನೆಯ ಸಿಬ್ಬಂದಿಗಳು ಮತ್ತು ಮಾಲೀಕರ ಉಡಾಫೆ ವರ್ತನೆಯಿಂದ ಬೇಸತ್ತ ನೊಂದ ಕುಟುಂಬ ಇಂದು ನೆಸ್ಲೆ ಕಾರ್ಖಾನೆಯ ಮುಂಭಾಗದಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಕಾರ್ಮಿಕನ ಜೊತೆಗೂಡಿ ನೊಂದ ಕುಟುಂಬ ಅನಿರ್ದಿಷ್ಟ ಅವಧಿ ಪ್ರತಿಭಟನೆಗೆ ಮುಂದಾಯಿತು. ನೆಸ್ಲೆ ಕಾರ್ಖಾನೆಯ ಸಿಬ್ಬಂದಿಗಳು ಮತ್ತು ಮಾಲೀಕರು ನೀಡಿದ ಕಿರುಕುಳವನ್ನು ವ್ಯಕ್ತಪಡಿಸಿ ಕಣ್ಣೀರು ತೋಡಿಕೊಂಡರು.
ಕಳೆದ ಒಂದು ವರ್ಷಗಳಿಂದ ನಿರಂತರವಾಗಿ ನಾವು ನೊಂದಿದ್ದೇವೆ. ನೆಸ್ಲೆ ಕಾರ್ಖಾನೆಯ ಮಾಲೀಕರು ಮತ್ತು ಸಿಬ್ಬಂದಿಗಳು ನಮಗೆ ನ್ಯಾಯ ಕೊಡಿ ಇಲ್ಲವೇ ವಿಷ ಕೊಡಿ, ಇಲ್ಲೇ ಕುಡಿದು ನಮ್ಮ ಕುಟುಂಬ ಸಾಮೂಹಿಕವಾಗಿ ಸಾವನ್ನಪ್ಪುತ್ತೇವೆ ಎಂದು ನ್ಯಾಯಕ್ಕಾಗಿ ಆಗ್ರಹಿಸಿದರು.
ನೆಸ್ಲೆ ಕಾರ್ಖಾನೆಯ ಮುಂಭಾಗದಲ್ಲಿ ಬಾಯ್ಲರ್ ನೀರಿನ ಸ್ಫೋಟಕ್ಕೆ ಗಂಭೀರ ಗಾಯಗೊಂಡಿರುವ ಕಾರ್ಮಿಕನ ಕುಟುಂಬ ನಡೆಸುತ್ತಿದ್ದ ಪ್ರತಿಭಟನೆಗೆ ನೂರಾರು ಕಾರ್ಮಿಕರು ಸಹಕಾರ ನೀಡಿ ನ್ಯಾಯ ಸಿಗುವವರೆಗೂ ನಾವು ನೊಂದ ಕಾರ್ಮಿಕನ ಪರವಾಗಿ ನಿಲ್ಲುತ್ತೇವೆ ಎಂದು ಕೆಲಸಕ್ಕೆ ತೆರಳದೆ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕೆಲಸಕ್ಕೆ ಕೈಕೊಟ್ಟ ಕಾರ್ಮಿಕರ ಫೋಟೋ ಕ್ಲಿಕ್ಕಿಸಿದ ಸೆಕ್ಯೂರಿಟಿ ವಿರುದ್ಧ ಆಕ್ರೋಶ..!
ನೆಸ್ಲೆ ಕಾರ್ಖಾನೆಯಲ್ಲಿ ಸೆಕ್ಯೂರಿಟಿಯಾಗಿ ಕಾರ್ಯನಿರ್ವಹಿಸುತ್ತಿರುವ ಕೊಡಗು ಮೂಲದ ಶರವಣ ಎಂಬ ಸೆಕ್ಯೂರಿಟಿ ಎಡ್ ಕೆಲಸಕ್ಕೆ ಗೈರಾಗಿ ಪ್ರತಿಭಟನೆಗೆ ಸಹಕರಿಸಿದ ಕಾರ್ಮಿಕರ ಫೋಟೋವನ್ನು ತನ್ನ ಮೊಬೈಲ್ ಫೋನಿನ ಮೂಲಕ ಕ್ಲಿಕ್ಕಿಸಿರುವುದನ್ನು ಗಮನಿಸಿದ ಕಾರ್ಮಿಕರು ಮತ್ತು ನೊಂದ ಕುಟುಂಬಸ್ಥರು ಸೆಕ್ಯೂರಿಟಿ ಹೆಡ್ ಶರವಣ ಎಂಬಾತನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈತನ ವರ್ತನೆಯಿಂದ ರೊಚ್ಚಿಗೆದ್ದ ನೊಂದ ಕುಟುಂಬಸ್ಥರು ಹಿಗ್ಗ ಮಗ್ಗ ಚಿಮಾರಿ ಹಾಕಿದರು ಕೆಲವು ಕಾಲ ಗೊಂದಲದ ವಾತಾವರಣವೂ ಕೂಡ ನಿರ್ಮಾಣವಾಯಿತು.

