ಮೈಸೂರು: ದಸರಾದಲ್ಲಿ ಕಂಬಳ ಕ್ರೀಡೆ ಆಯೋಜನೆ ವಿರೋಧಿಸಿ ಪರಿಸರವಾದಿಗಳಿಂದ ಸಾತಗಳ್ಳಿಯಲ್ಲಿ ಪ್ರತಿಭಟನೆ ನಡೆಸಲಾಯಿತು.

ಕಂಬಳಕ್ಕಾಗಿ ಜಾಗ ಗುರುತಿಸಿರುವ ಜಾಗದಲ್ಲೇ ಪ್ರತಿಭಟನೆ ನಡೆಸಲಾಯಿತು. ಶಾಮಿಯಾನ ಹಾಕಿ ಪರಿಸರವಾದಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.ಭೂಮಿ ಇರುವುದೊಂದೇ ಉಳಿಸೋಣ ಬನ್ನಿ ನಾವಿಂದೇ ಪರಿಸರಕ್ಕಾಗಿ ನಾವು ಎಂದು ಬ್ಯಾನರ್ ಹಾಕಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯಲ್ಲಿ ಎ. ಟಿ ರಾಮಸ್ವಾಮಿ, ಪರಶುರಾಮ ಗೌಡ, ರೈತ ಸಂಘಟನೆಯ ಬಡಗಲಪುರ ನಾಗೇಂದ್ರ, ಹೊಸಕೋಟೆ ಬಸವರಾಜ್, ಸೇರಿ ವಿವಿಧ ಸಂಘಟನೆಯ ಮುಖಂಡರು ಭಾಗಿಯಾಗಿದ್ದರು.