ಮೈಸೂರು: ನಗರದಲ್ಲಿ ಹೆಚ್ಚುತ್ತಿರುವ ಚಳಿ ಹಾಗೂ ಮಂಜಿನ ವಾತಾವರಣದಲ್ಲಿ ತೊಂದರೆ ಅನುಭವಿಸುತ್ತಿದ್ದ , ಭಿಕ್ಷುಕರಿಗೆ, ನಿರ್ಗತಿಕರಿಗೆ, ಹಾಗೂ ಕೆ ಆರ್ ಆಸ್ಪತ್ರೆಯ ರೋಗಿಗಳ ಆರೈಕೆ ಮಾಡಲು ಬಂದಿರುವ ನಾಗರಿಕರಿಗೆ ಯೂನಿಕ್ ಯೂತ್ ಫೌಂಡೇಶನ್ ಹಾಗೂ ಕೆಎಂಪಿಕೆ ಟ್ರಸ್ಟ್ ವತಿಯಿಂದ ಹೊದಿಕೆ ಹಂಚುವ ಮೂಲಕ ಮಾನವೀಯತೆ ಮೆರೆಯಲಾಯಿತು.

ಈಗಾಗಲೇ ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷರಾದ ವಿಕ್ರಂ ಅಯ್ಯಂಗಾರ್ ನೇತೃತ್ವದಲ್ಲಿ 15 ದಿನಗಳ ಕಾಲ ನಿರಂತರವಾಗಿ ರಾತ್ರಿ 12 ರಿಂದ 1ರವರಿಗೂ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಮಾರ್ಕೆಟ್, ಹಾಡಿ ಜನಾಂಗದವರಿಗೆ, ಗುಡಿಸಲಿನಲ್ಲಿ ವಾಸ ಮಾಡುವ ಬಡ ಜನರಿಗೆ ಸೇರಿದಂತೆ ಇನ್ನಿತರ ಸ್ಥಳಗಳಿಗೆ ತೆರಳಿ ಹೊದಿಕೆಯನ್ನು ವಿತರಿಸುತ್ತಿದ್ದು ಅವರಿಗೆ ಹಲವಾರು ಸಂಘ ಸಂಸ್ಥೆಗಳು ಕೈಜೋಡಿಸುತ್ತಿದ್ದಾರೆ ಈಗಾಗಲೇ 300ಕ್ಕೂ ಹೆಚ್ಚು ಹೊದಿಕೆಯನ್ನು ವಿತರಿಸಿದ್ದಾರೆ

ಈ ವೇಳೆ ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ಮಾತನಾಡಿ ಸ್ನೇಹಿತರ ಸಹಕಾರದೊಂದಿಗೆ ಕಳೆದ ನಾಲ್ಕು ವರ್ಷದಿಂದ ನಿರಂತರವಾಗಿ ಡಿಸೆಂಬರ್ ಹಾಗೂ ಜನವರಿ ತಿಂಗಳಿನಲ್ಲಿ ಚಳಿಗಾಲ ಸಂದರ್ಭದಲ್ಲಿ ಸ್ನೇಹಿತರೊಡನೆ ಸ್ಥಳಕ್ಕೆ ತೆರಳಿ ಅವರ ಸ್ಥಿತಿಗಳನ್ನು ನೋಡಿ ಹೊದಿಕೆ ಯನ್ನು ವಿತರಿಸುತ್ತಾ ಬಂದಿದ್ದೇವೆ, ಜೊತೆಗೆ ಕೆಲವೊಂದು ಹಾಡಿಗಳಿಗೆ ಭೇಟಿ ಕೊಟ್ಟಿ ಹಾಡಿ ಜನಾಂಗದವರಿಗೂ ಹೂದಿಕೆ ಯನ್ನು ವಿತರಿಸಲಾಗುವುದು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್, ಮಲೆ ಮಹದೇಶ್ವರ ಸೇವಾ ಸಂಸ್ಥೆಯ ಅಧ್ಯಕ್ಷ ಮಹಾನ್ ಶ್ರೇಯಸ್, ಶಿವು, ಯೂನಿಕ್ ಯೂತ್ ಫೌಂಡೇಶನ್ ಸಂಘಟನೆಯ ಸಂಚಾಲಕ ಮುದ್ದಸಿರ್ ಅಲಿ ಖಾನ್,ಡಾ. ಜೀಶನ್. ಧರ್ಮಶ್ರೀ,ಮುಜಕ್ಕಿರ್ ಅಲಿ ಖಾನ್,ನರ್ಗೀಸ್ ಪಠಾಣ್, ಶಹಾಬ್ ಉರ್ ರೆಹಮಾನ್,ಫೈಜಾನ್ ಅಹ್ಮದ್ ಖಾನ್, ಅಖಿಫ್, ಶಾರುಖ್, ಘೌಸ್, ಹೈದರ್ ಪಠಾಣ್ ಇನ್ನಿತರರು ಭಾಗವಹಿಸಿದ್ದರು.