ನಂಜನಗೂಡು: ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಅಯೋಗ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಸೆ. 22 ರಿಂದ ರಾಜ್ಯಾದ್ಯಂತ ಹಮ್ಮಿಕೊಂಡಿದೆ. ಕಾಲಂ 903ರಲ್ಲಿ ಕಡ್ಡಾಯವಾಗಿ ಮಡಿವಾಳ ಎಂದು ನಮೂದಿಸಿ ಎಂದು ಮಡಿವಾಳರ ಸಂಘದ ತಾಲ್ಲೂಕು ಸಂಘಟನಾ ಕಾರ್ಯದರ್ಶಿ ಗಟ್ಟವಾಡಿ ಮಹದೇವಸ್ವಾಮಿ ಮನವಿ ಮಾಡಿದರು.
ನಂಜನಗೂಡಿನಲ್ಲಿ ಮಾತನಾಡಿದ ಅವರು, ಗಣತಿದಾರರು ತಮ್ಮ ಮನೆಗೆ ಬಂದಾಗ ಸಮಾಜದ ಬಂಧುಗಳು ಸರ್ಕಾರದಿಂದ ಸಾಮಾಜಿಕ, ಶಿಕ್ಷಣ, ಆರ್ಥಿಕ ಉದ್ಯೋಗ ಇತ್ಯಾದಿ ಸರ್ಕಾರದ ಮೀಸಲಾತಿ ಸೌಲಭ್ಯಗಳನ್ನು ಪಡೆಯಲು ಸಮಾಜದ ಬಂಧುಗಳು ಜಾತಿ ಕಾಲಂ 9 ರ ಸರ್ಕಾರದ ಗೆಹಟ್ ನಂ 903 ರಲ್ಲಿ ಮಡಿವಾಳ ಎಂಬುದಾಗಿ ಕಡ್ಡಾಯವಾಗಿ ನಮೂದಿಸಬೇಕು.
ಉಪಜಾತಿಯು ಕಾಲಂನಲ್ಲಿಯೂ ಮಡಿವಾಳ ಎಂದು ನಮೂದಿಸಬೇಕು. ಇನ್ನಿತರ ಯಾವುದೇ ಪರ್ಯಾಯ ಜಾತಿಗಳ ಪದನಾಮಗಳನ್ನು ಬರೆಸಬಾರದು. ಪ್ರತಿಯೊಂದು ಕುಟುಂಬದವರು ಸಮಾಜದ ಮುಖಂಡರು, ಗ್ರಾಮಗಳ ಮುಖ್ಯಸ್ಥರು, ಗ್ರಾಮ ಪಂಚಾಯಿತಿ ಸದಸ್ಯರುಗಳು, ಮತ್ತು ಸಮಾಜದ ವಿದ್ಯಾರ್ಥಿಗಳು,
ಕಡ್ಡಾಯವಾಗಿ ಈ ಸಮೀಕ್ಷೆಯಲ್ಲಿ ಭಾಗವಹಿಸಿ ತಮ್ಮ ಕುಟುಂಬಗಳ ವಿವರಗಳನ್ನು ಸಮೀಕ್ಷೆದಾರರಿಗೆ ನೀಡಿ ನಮ್ಮ ಜನಸಂಖ್ಯೆಯ ನಿಖರವಾದ ಮಾಹಿತಿಯನ್ನು ಸರ್ಕಾರಕ್ಕೆ ಒದಗಿಸಿ ನಮ್ಮ ಜನಸಂಖ್ಯೆಗೆ ಅನುಗುಣವಾಗಿ ಸರ್ಕಾರದಿಂದ ಸಿಗಬೇಕಾದ ಸವಲತ್ತುಗಳನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.

