ತಿ.ನರಸೀಪುರ: ಆಲಗೂಡು ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿಯಮಿತದ ಆಡಳಿತ ಮಂಡಳಿಗೆ ಸಾಲಗಾರರಲ್ಲದ ಒಂದು ಕ್ಷೇತ್ರ ಆಲಗಾರರ 9 ನಿರ್ದೇಶಕರು ಸೇರಿದಂತೆ 10 ನಿರ್ದೇಶಕರುಗಳ ಸ್ಥಾನಗಳಿಗೆ ಚುನಾವಣೆ ನಡೆಸಲಾಯಿತು.

ಆಲಗೂಡು ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಸಹಕಾರ ಸಂಘದ ಕಚೇರಿಯಲ್ಲಿ ನಡೆದ ಚುನಾವಣಾ ಪ್ರಕ್ರಿಯೆ ನಡೆಯಿತು. ಆಲಗೂಡು ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿಯಮಿತದ ಆಡಳಿತ ನಡೆದ ಚುನಾವಣೆಯಲ್ಲಿ ಮಾಜಿ ಅಧ್ಯಕ್ಷ ಪಿ.ನಟರಾಜು ನೇತೃತ್ವದ ಬಣ ಭರ್ಜರಿ ಜಯಗಳಿಸಿತು.

ಸಾಲಗಾರರ ಕ್ಷೇತ್ರದಿಂದ ಪಿ.ನಟರಾಜು (340), ನಾಗಣ್ಣ (278), ಮಹದೇವ (219), ಶಿವಣ್ಣ (212), ಮಹದೇವಮ್ಮ(254) ಕಾಂತಮ್ಮ (213), ಹೆಚ್. ಮರಿಸ್ವಾಮಿ (236), ಜಯಣ್ಣ (144) ಮತ ಪಡೆದರೆ, ಸಾಲಗಾರರಲ್ಲದ ಕ್ಷೇತ್ರದಿಂದ ಹೆಳವರಹುಂಡಿ ಸಹದೇವ 154 ಮತ ಪಡೆದು ಜಯಗಳಿಸಿದರು.

ಇನ್ನುಳಿದಂತೆ ಬಣದ ನಾಯಕತ್ವ ಬಿ.ವೀರಭದ್ರಪ್ಪ (230) ಮಲ್ಲಣ್ಣ (256) ಆಲಗೂಡು ಕ್ಷೇತ್ರದಿಂದ ನಂಜುಂಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಸಿಡಿಒ ಹಸೀನಾ ಘೋಷಣೆ ಮಾಡಿದರು. ಈ ವೇಳೆ ಮಾತನಾಡಿದ ಮಾಜಿ ಅಧ್ಯಕ್ಷ ಪಿ.ನಟರಾಜು, ಸಹಕಾರ ಸಂಘದ ವ್ಯಾಪ್ತಿಗೊಳಪಡುವ ಮತ ಬಾಂಧವರು ನಮ್ಮಮೇಲೆ ವಿಶ್ವಾಸವಿಟ್ಟು ಭರ್ಜರಿ ಜಯ ತಂದು ಕೊಟ್ಟಿದ್ದಾರೆ.ಅವರ ನಂಬಿಕೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಾಮಾಣಿಕ ವಾದ ಕೆಲಸ ಮಾಡುತ್ತೇನೆ ಎಂದರು.

ಸಾಲಗಾರರಲ್ಲದ ಕ್ಷೇತ್ರದಿಂದ ಗೆಲುವು ಸಾಧಿಸಿದ ಎಂ.ಕೆ.ಸಹದೇವ ಮಾತನಾಡಿ ಸಹಕಾರ ಸಂಘದಿಂದ ರೈತರಿಗೆ ದೊರಕಬಹುದಾದ ಎಲ್ಲ ಸವಲತ್ತುಗಳನ್ನು ಪ್ರಾಮಾಣಿಕವಾಗಿ ರೈತರಿಗೆ ನೇರವಾಗಿ ತಲುಪಿಸಲಾಗುತ್ತದೆ ಎಂದರು.