ತಿ. ನರಸೀಪುರ: ಪಿ.ಎಲ್.ಡಿ ಬ್ಯಾಂಕ್ ನ ಆಡಳಿತ ಮಂಡಳಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಪಿ ಎಲ್ ಡಿ ಬ್ಯಾಂಕ್ ಕಛೇರಿಯಲ್ಲಿ ಚುನಾವಣೆ ನಡೆಯಿತು.
ಅಧ್ಯಕ್ಷರ ಸ್ಥಾನಕ್ಕೆ ಕೆಂಪಯ್ಯನಹುಂಡಿ ಮಹದೇವಣ್ಣ, ದೊಡ್ಡಬಾಗಿಲು ಮಲ್ಲಿಕಾರ್ಜುನ್ ಉಪಾಧ್ಯಕ್ಷರ ಸ್ಥಾನಕ್ಕೆ ಹೆಮ್ಮಿಗೆ ಸೋಮಣ್ಣ, ನೆರೆಗೆತನಹಳ್ಳಿ ಮಹದೇವಸ್ವಾಮಿ ನಾಮಪತ್ರ ಸಲ್ಲಿಸಿದರು.

ಮಲ್ಲಿಕಾರ್ಜುನ ಮತ್ತು ಸೋಮಣ್ಣ ನಾಮಪತ್ರ ಹಿಂಪಡೆದ ಹಿನ್ನೆಲೆ ಅಧ್ಯಕ್ಷರಾಗಿ ಕೆಂಪಯ್ಯನಹುಂಡಿ ಮಹದೇವಣ್ಣ, ಉಪಾಧ್ಯಕ್ಷರಾಗಿ ನೆರಗ್ಯಾತನಹಳ್ಳಿ ಎನ್.ಎನ್ ಮಹದೇವಸ್ವಾಮಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಘೋಷಣೆ ಮಾಡಿದರು.

ಅಧ್ಯಕ್ಷರಾಗಿ ಕೆಂಪಯ್ಯಹುಂಡಿ ಮಹದೇವಣ್ಣ, ಉಪಾಧ್ಯಕ್ಷರಾಗಿ ಎನ್ ಎನ್ ಮಹದೇವಸ್ವಾಮಿ ಅವಿರೊಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಣೆ ಮಾಡುತ್ತಿದ್ದಂತೆ ಪಟಾಕಿ ಸಿಡಿಸಿ ಸಿಹಿ ಹಂಚಿ ಮುಖಂಡರು ಸಂಭ್ರಮಿಸಿದರು.

ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಮುಖಂಡರು ಶುಭ ಕೋರಿದರು. ಈ ವೇಳೆ ಸದಸ್ಯರಾದ ಅನಿಲ್, ಮಲ್ಲಿಕಾರ್ಜುನ್, ಸೋಮಣ್ಣ, ಲಿಂಗಪ್ಪಾಜಿ, ಶಿವಮೂರ್ತಿ, ನಾಗರತ್ನ, ವಜ್ರೇಗೌಡ, ಪ್ರಸನ್ನ, ಮಹೇಶ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

