ನಂಜನಗೂಡು: ತಾಲ್ಲೂಕಿನ ವರುಣ ವಿಧಾನಸಭಾ ಕ್ಷೇತ್ರದ ಹದಿನಾರು ಗ್ರಾಮದಲ್ಲಿ ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ವರುಣ ವಿಧಾನಸಭಾ ಕ್ಷೇತ್ರದಲ್ಲಿ 1107.72 ಕೋಟಿ ರೂ ವೆಚ್ಚದಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. ವರುಣ ಕ್ಷೇತ್ರ ನಮ್ಮ ಮನೆ ನಾನು ಹೆಚ್ಚು ಮಾತನಾಡುವುದಿಲ್ಲ. ಕಳೆದ ವರ್ಷದಲ್ಲಿ 501 ಕೋಟಿ ರೂ ವೆಚ್ಚದಲ್ಲಿ ಕಾಮಗಾರಿ ಮಾಡಿದ್ದೇವೆ.
ಎರಡು ವರ್ಷ ಆದ ಮೇಲೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುತ್ತಿದಾವೆ. ನಮ್ಮ ಸರ್ಕಾರ ಅಭಿವೃದ್ಧಿ ಮಾಡುತ್ತಿದ್ದೆ. ಜನ ಸಾಮಾನ್ಯರಿಗೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಮಾಡಿದ್ದೇವೆ. ವಿರೋಧ ಪಕ್ಷದವರು ಟೀಕೆ ಮಾಡುತ್ತಿದ್ದಾರೆ. ಖಜಾನೆ ಖಾಲಿಯಾಗಿದೆ ಎನ್ನುತ್ತಿದ್ದಾರೆ. ನಾವು ಎಲ್ಲಾ ಕ್ಷೇತ್ರಗಳಲ್ಲೂ ಸಾಧನಾ ಸಮಾವೇಶ, ಸಾವಿರಾರು ಕೋಟಿ ರೂ ವೆಚ್ಚದಲ್ಲಿ ಕಾಮಗಾರಿಗೆ ಚಾಲನೆ ನೀಡುತ್ತಿದ್ದೇವೆ.
ಕರ್ನಾಟಕದ ಆರ್ಥಿಕ ಸ್ಥಿತಿ ಸುಧಾರಿಸಿದೆ. ಗ್ಯಾರಂಟಿ ಯೋಜನೆ ಸೇರಿದಂತೆ ಅಭಿವೃದ್ಧಿಗೂ ಅನುದಾನ ನೀಡುತ್ತಿದ್ದೇವೆ. 2 ಲಕ್ಷಕ್ಕೂ ಹೆಚ್ಚು ತಲಾ ಆದಾಯ ಮೀರಿದೆ. ಪ್ರಗತಿ ಪಥದಲ್ಲಿ ಕರ್ನಾಟಕ ಸಾಗುತ್ತಿದೆ. ಇದಕ್ಕೆ ಗ್ಯಾರಂಟಿ ಯೋಜನೆಗಳು ಕಾರಣ. ಬಂಡವಾಳ ಶಾಯಿ ನೀತಿಯನ್ನು ಕೇಂದ್ರ ಸರ್ಕಾರ ಅನುಸರಿಸುತ್ತಿದೆ. ಬೆಲೆ ಏರಿಕೆಯಿಂದ ಜನರು ತತ್ತರಿಸಿದ್ದಾರೆ.
ರಾಹುಲ್ ಗಾಂಧಿ ನೇತೃತ್ವದಲ್ಲಿ ಬೃಹತ್ ರ್ಯಾಲಿ ನಡೆಸಿದ್ದೇವು. ಚುನಾವಣಾ ಅವವ್ಯಹಾರ ನಡೆಯುತ್ತಿದೆ. ಫೇಕ್ ವಿಳಾಸ ನೀಡಿ ಮತದಾನ ಮಾಡೋದು . ಹೊಸದಾಗಿ ಮತದಾರರನ್ನು ಬಿಟ್ಟು ವಯಸ್ಸಾಗಿರನ್ನು ಸೇರಿಸಿ ಅಕ್ರಮವಾಗಿ ಗೆಲ್ಲುವ ಕೆಲಸವನ್ನು ಬಿಜೆಪಿ ಮಾಡುತ್ತಿದ್ದೆ. ನಮಗೆ ಎಲೆಕ್ಟ್ರಾನಿಕ್ ಡೇಟಾ ಕೊಡುತ್ತಿಲ್ಲ. ಬಿಜೆಪಿ ಜೊತೆ ಚುನಾವಣಾ ಆಯೋಗ ಕೈ ಜೊಡಿಸಿದೆ. ಚುನಾವಣೆಯಲ್ಲಿ ಅಕ್ರಮ ನಡೆದರೆ ಬಂಡವಾಳ ಶಾಹಿಗಳು ಅಧಿಕಾರಕ್ಕೆ ಬರುತ್ತಾರೆ. ಇದು ಗಂಭೀರ ವಿಷಯ.
ಕಾರ್ಯಕ್ರರ್ತರು ಪ್ರತಿ ಮನೆ ಮನೆಗೆ ಹೋಗಿ ವಿಚಾರ ಮುಟ್ಟಿಸಬೇಕು. ಈ ಬಗ್ಗೆ ಹೋರಾಟ ಮಾಡಬೇಕು. 4500 ಕೋಟಿ ರೂಪಾಯಿಗಳನ್ನು ಸಿದ್ದರಾಮಯ್ಯ ರವರು ವರುಣಾ ಕ್ಷೇತ್ರಕ್ಕೆ ತದ್ದುಕೊಟ್ಟಿದ್ದಾರೆ. ವರುಣ ಕ್ಷೇತ್ರದ ಜನರ ಋಣವನ್ನು ನಾನು ಮರೆಯೋದಿಲ್ಲ ಎಂದು ಹೇಳಿದರು.

