ಮೈಸೂರು : ಎಂಡಿಎ ಅಕ್ರಮ ಹೆಚ್ಚಾಗಿದ್ದು, ನೂರು ಕೋಟಿ ಮೌಲ್ಯದ ಆಸ್ತಿಯನ್ನು ಇಡಿ ವಶಕ್ಕೆ ಪಡೆದಿದೆ. ಮೈಸೂರು ಅಭಿವೃದ್ಧಿ ಪ್ರಾಧಿಕಾರದ 92 ನಿವೇಶನಗಳ ಮುಟ್ಟುಗೋಲು ಹಾಕಲಾಗಿದೆ.

ಮೈಸೂರು ಅಭಿವೃದ್ಧಿ ಪ್ರಾಧಿಕಾರ (ಮುಡಾ) ಅಕ್ರಮ ಪ್ರಕರಣ ದಾಖಲಾಗಿದೆ. ಕಾನೂನು ಉಲ್ಲಂಘನೆ ಮಾಡಿ ಪ್ರಭಾವಿಗಳು ಪಡೆದಿದ್ದ ಸೈಟ್‌ಗಳು ಇಡಿ ವಶಕ್ಕೆ ಪಡೆದಿದೆ. ಅಧಿಕಾರಗಳು, ರಾಜಕಾರಣಿಗಳು ಸೇರಿ ಪ್ರಭಾವಿಗಳು ಪಡೆದಿದ್ದ ಸೈಟ್‌ಗಳು. ಸಿಎಂ ಸಿದ್ದರಾಮಯ್ಯಗೆ ಸಂಬಂಧಿಸಿದ ಪ್ರಕರಣ ಬೆಳಕಿಗೆ ಬಂದ ಬಳಿಕ ಮುಡಾ ಅಕ್ರಮಕ್ಕೆ ಇಡಿ ಎಂಟ್ರಿ ಕೊಟ್ಟಿದೆ.

ಈ ಹಿಂದೆ 300 ಕೋಟಿ ಮಾರುಕಟ್ಟೆ ಬೆಲೆಯ 160 ನಿವೇಶನಗಳ ಇಡಿ ವಶಕ್ಕೆ ಪಡೆದಿತ್ತು. ಸದ್ಯ ಒಟ್ಟು 400 ಕೋಟಿ ಬೆಲೆ ಬೆಲೆ ಬಾಳುವ ಸೈಟ್‌ಗಳ ಇಡಿ ವಶಕ್ಕೆ ಪಡೆದಿದೆ. ಲೋಕಾಯುಕ್ತ ಸಿಎಂ ಪ್ರಕರಣಕ್ಕೆ ಬಿ ರಿಪೋರ್ಟ್ ಸಲ್ಲಿಸಿತ್ತು. ಬಿ ರಿಪೋರ್ಟ್ ಅರ್ಜಿ ಪ್ರಶ್ನಿಸಿ ದೂರುದಾರ ಸ್ನೇಹಮಿಯಿ ಕೃಷ್ಣ ಕೋರ್ಟ್ ಮೆಟ್ಟಿಲೇರಿದ್ದಾರೆ. ಇದೀಗ ಇಡಿಯಿಂದ ತನಿಖೆ ಚುರುಕುಗೊಂಡಿದೆ. ಮತ್ತೆ 50:50 ಸೈಟ್ ಹಂಚಿಗೆ ಗೋಲ್ಮಾಲ್ ಮರುಜೀವ ಪಡೆದಿದೆ.