ಮೈಸೂರು: ಇಡಿ ಯಿಂದ 300 ಕ್ಕೂ ಹೆಚ್ಚು ಕೋಟಿ ಮೌಲ್ಯದ ಮೂಡಾ ಆಸ್ತಿ ಮುಟ್ಟುಗೋಲು ವಿಚಾರವಾಗಿ ಇದು ನನ್ನ ಹೋರಾಟಕ್ಕೆ ಸಿಕ್ಕ ಪ್ರಾಥಮಿಕ ಜಯ ಎಂದು ಮೂಡಾ ಹಗರಣದ ದೂರುದಾರ ಸ್ನೇಹಮಹಿ ಕೃಷ್ಣ ಹೇಳಿಕೆ ನೀಡಿದ್ದಾರೆ.

ನನ್ನ ಆರೋಪಗಳಿಗೆ ನಾನು ಸೂಕ್ತ ದಾಖಲೆಗಳನ್ನ ಇಡಿ ಗೆ ನೀಡಿದ್ದೆ.ಇಡಿ ಕೂಡ ಸಾಕಷ್ಟು ದಾಖಲೆ ಸಂಗ್ರಹಿಸಿದೆ. ಪ್ರಥಮವಾಗಿ ಸುಮಾರು 147 ಸ್ಥೀರಾಸ್ತಿಗಳನ್ನ ತಾತ್ಕಲಿಕ ವಾಗಿ ಮುಟ್ಟುಗೋಲು ಹಾಕಿಕೊಂಡಿದೆ‌. ಇನ್ನು ಸಾವಿರಾರು ಕೊಟಿ ಆಸ್ತಿ ಅಕ್ರಮ ಆಗಿದೆ.

ಸಿದ್ದರಾಮಯ್ಯ ಕುಟುಂಬದ 14 ನಿವೇಶನ ಈ ಪಟ್ಟಿಯಲ್ಲಿ ಇದೆಯಾ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಸಿದ್ದರಾಮಯ್ಯ ಗೆ ಮೂಡಾ ಮಾಜಿ ಆಯುಕ್ತ ನಟೇಶ್ ಕಂಡರೆ ಭಯ. ಅವರ ಬಳಿ ಸಿದ್ದರಾಮಯ್ಯ ಹಗರಣ ಕುರಿತ ಹಲವು ದಾಖಲೆಗಳಿವೆ . ಅದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಟೇಶ್ ವಿರುದ್ದ ಕ್ರಮ ಕೈಗೊಳ್ಳುತ್ತಿಲ್ಲ.

ಸಿಬಿಐ ಗೆ ಈ ಪ್ರಕರಣ ವಹಿಸುವಂತೆ ಕೋರ್ಟ್ ಮೊರೆ ಹೋಗಿದ್ದೇನೆ. ಮೂಡಾ ವಿರುದ್ದ ಜಾರಿ ನಿರ್ದೇಶನಾಲಯದ ಈ ಕ್ರಮ ಕೋರ್ಟ್ ಗಮನ ಸೆಳೆಯಲು ಅನುಕೂಲವಾಗಿದೆ. ಮೂಡಾ ಹಗರಣದ ದೂರುದಾರ ಸ್ನೇಹಮಹಿ ಕೃಷ್ಣ ಹೇಳಿಕೆ ನೀಡಿದ್ದಾರೆ.