ಮೈಸೂರು: ಮೈಸೂರಲ್ಲಿ ಡ್ರಗ್ಸ್ ಫ್ಯಾಕ್ಟರಿ ಪ್ರಕರಣ ಹೆಚ್ಚಾಗಿದ್ದು, ನೂರಾರು ಕೋಟಿ ಡ್ರಗ್ಸ್ ಸಿಕ್ಕ ಬೆನ್ನಲ್ಲೆ ಪೊಲೀಸರು ಅಲರ್ಟ್ ಆಗಿದ್ದಾರೆ. ಮೈಸೂರು ನಗರ ಪೊಲೀಸರಿಂದ ನಿರಂತರ ಕಾರ್ಯಾಚರಣೆ ನಡೆಯುತ್ತಿದೆ.
ತಡರಾತ್ರಿ ದಾಳಿ ಮಾಡಿ ಪೊಲೀಸ್ ಕಮೀಷನರ್ ಕೇಸ್ ದಾಖಲಿಸಿಕೊಂಡಿದ್ದಾರೆ. ಎನ್ ಡಿಪಿ ಎಸ್ ಕಾಯ್ದೆ ಅಡಿ 6 ದೂರು ದಾಖಲಾಗಿದೆ. 71 ಮಂದಿ ಅನುಮಾನಸ್ಪದ ವ್ಯಕ್ತಿಗಳಿಗೆ ತಪಾಸಣೆ ನಡೆಸಲಾಗಿದೆ.

ಮಂಡಿಮೊಹಲ್ಲಾ, ಉದಯಗಿರಿ ಠಾಣಾ ವ್ಯಾಪ್ತಿಯಲ್ಲಿ ದಾಳಿ ನಡೆಸಲಾಗಿದೆ. ಸುನ್ನಿ ಚೌಕ, ಕೆಸರೆ, ಹುಡ್ಕೋನಗರಗಳಲ್ಲಿ ತೀವ್ರ ತಪಾಸಣೆ ನಡೆಸಲಾಗಿದೆ.

