ಮೈಸೂರು : ಚಾಲಕನ ನಿಯಂತ್ರಣ ತಪ್ಪಿ ಟಾಟಾ ಎಸ್ ಪಲ್ಟಿಯಾಗಿ ಹತ್ತು ಮಂದಿಗೆ ಗಾಯಗೊಂಡಿರುವ ಘಟನೆ ಸರಗೂರು ಟೌನಿನ ಕಬಿನಿ ನದಿ ಚಾನೆಲ್ ಬಳಿ ನಡೆದಿದೆ.
ಶುಂಠಿ ಕೆಲಸಕ್ಕಾಗಿ ಕೂಲಿ ಕಾರ್ಮಿಕರು ತೆರಳುತ್ತಿದ್ದರು. ಚಾಲಕನ ಅಜಾಗರೂಕತೆಯಿಂದ ಟಾಟಾ ಎಸ್ ವಾಹನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಚಾಲಕನ ನಿಯಂತ್ರಣ ತಪ್ಪಿ ವಾಹನ ಮೂರು ಬಾರಿ ಪಲ್ಟಿಯಾಗಿದೆ.
ಗೊಂತಗಲಗುಂಡಿ ಗ್ರಾಮದಿಂದ ಸರಗೂರಿಗೆ ವಾಹನ ತೆರಳುತ್ತಿತ್ತು. ಚಾಲಕ ಸೇರಿ ಹತ್ತು ಮಂದಿಗೆ ಗಾಯವಾಗಿದೆ. ಗಾಯಾಳುಗಳು ಹೆಚ್.ಡಿ ಕೋಟೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಸರಗೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

