ಮೈಸೂರು: ಮೈಸೂರಿನ ನಿರಂತರ ಫೌಂಡೇಶನ್ ವತಿಯಿಂದ ಡಿಸೆಂಬರ್ 25ರಿಂದ 30ರವರಗೆ (6 ದಿನಗಳ ನಾಟಕೋತ್ಸವ), ಮೈಸೂರಿನ ಕಲಾಮಂದಿರ ಆವರಣದಲ್ಲಿರುವ ಕಿರುರಂಗಮಂದಿರದಲ್ಲಿ ನಡೆಯಲಿದೆ.
ಡಿಸೆಂಬರ್ 25ರ ಬುಧವಾರ ಸಂಜೆ 7ಕ್ಕೆ, ಸಮತೆಂತೋ ಮೈಸೂರು ಪ್ರಸ್ತುತಿಯ ಏಕವ್ಯಕ್ತಿ ರಂಗ ಪ್ರಯೋಗ, ನಡೆಯಲಿದೆ. 26ರ ಗುರುವಾರ ಸಂಜೆ 5:30ಕ್ಕೆ ಅಭಿನವ ವೀರಭದ್ರೇಶ್ವರ ತಂಡದ ವೀರಗಾಸೆ ಜನಪದ ನೃತ್ಯ,
ಸಂಜೆ 7ಕ್ಕೆ, ನಿರ್ದಿಗಂತ ಕೆ. ಶೆಟ್ಟಹಳ್ಳಿ (ಶ್ರೀರಂಗಪಟ್ಟಣ) ಅಭಿನಯದ ನಾಟಕ : ತಿಂಡಿಗೆ ಬಂದ ತುಂಡೇರಾಯ, 27ರ ಶುಕ್ರವಾರ, ಸಂಜೆ 7ಕ್ಕೆ, ಆಳ್ವಾಸ್ ರಂಗ ಅಧ್ಯಯನ ಕೇಂದ್ರ ಮೂಡುಬಿದಿರೆ ಅಭಿನಯದ, ನಾಟಕ : ಚಾರುವಸಂತ, 28ರ ಶನಿವಾರ, ಸಂಜೆ 7ಕ್ಕೆ, ಉಸ್ತಾದ್ ಫಯಾಜ್ ಖಾನ್ ಸಂಗೀತ ಸಂಜೆ.
29ಭಾನುವಾರ ಸಂಜೆ ಸಂಜೆ 7ಕ್ಕೆ, ಸಮುದಾಯ ರಾಯಚೂರು ಅಭಿನಯದ ನಾಟಕ : ರಕ್ತ ವಿಲಾಪ, 30ರ ಸೋಮವಾರ ಸಂಜೆ 5:30ಕ್ಕೆ ನಗಾರಿ ಮಂಜು ಮೈಸೂರು ಮತ್ತು ತಂಡದಿಂದ ನಗಾರಿ ಮತ್ತು ತಮಟೆ ವಾದ್ಯ ಕಾರ್ಯಕ್ರಮ, ಸಂಜೆ 7ಕ್ಕೆ, ಭಳಿರೇ ವಿಚಿತ್ರಮ್ ತಂಡ ಅಭಿನಯಯಿಸುವ ಕುವೆಂಪು ವಿರಚಿತ ‘ಶ್ರೀ ರಾಮಾಯಣ ದರ್ಶನಂ’ಕೃತಿಯಿಂದ ನಾಟಕ : ದಶಾನನ ಸ್ವಪ್ನಸಿದ್ಧಿ ನಡೆಯಲಿದೆ.

