Categories: ಮೈಸೂರು

ಸಾಮಾಜಿಕ ಜಾಲತಾಣಗಳಲ್ಲಿ ಭಾವಚಿತ್ರ ಹಂಚಿಕೊಳ್ಳಬೇಡಿ: ಎಸ್ಪಿ

ಮೈಸೂರು: ಭಾವಚಿತ್ರಗಳನ್ನು ಕಿಡಿಗೇಡಿಗಳು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯಿರುವುದರಿಂದ  ಸಾಮಾಜಿಕ ಜಾಲತಾಣಗಳಲ್ಲಿ ಭಾವಚಿತ್ರ ಮತ್ತು ಕುಟುಂಬದ ಮಾಹಿತಿಯನ್ನು ಹಂಚಿಕೊಳ್ಳದಂತೆ ವಿದ್ಯಾರ್ಥಿಗಳಿಗೆ ಜಿಲ್ಲಾ  ಪೊಲಿಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಕಿವಿಮಾತು ಹೇಳಿದ್ದಾರೆ.

ನಗರದ ಮೈಸೂರು- ಬನ್ನೂರು ರಸ್ತೆಯಲ್ಲಿರುವ ಎಟಿಎಂಇ ಇಂಜಿನಿಯರಿಂಗ್ ಕಾಲೇಜಿನ ಎನ್.ಎಸ್.ಎಸ್ ಘಟಕ,  ಕಾಲೇಜು ಆಂತರಿಕ ದೂರು ಸ್ವೀಕಾರ ಸಮಿತಿ (ಸಿ.ಐ.ಸಿ.ಸಿ) ಹಾಗೂ ಮೈಸೂರು ಜಿಲ್ಲಾ ಪೋಲಿಸ್ ಸಹಯೋಗದಲ್ಲಿ ಅಪರಾಧ ತಡೆ ಮಾಸಾಚರಣೆ ಹಾಗೂ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿನ ವಿದ್ಯಾರ್ಥಿ ಸಮೂಹ ಭಾರತದ ಭವಿಷ್ಯತ್ತಿನ ಪ್ರಜೆಗಳಾಗಿದ್ದು, ನೆಲದ ಕಾನೂನನ್ನು ಗೌರವಿಸಬೇಕು, ಸಾಮಾಜಿಕ ಜಾಲತಾಣಗಳ ಬಳಕೆಯ ಬಗ್ಗೆ ಎಚ್ಚರವಾಗಿರಬೇಕು, ಯಾವುದೇ ವೈಯಕ್ತಿಕ ಮಾಹಿತಿಗಳನ್ನು, ಕುಟುಂಬದವರ ಭಾವಚಿತ್ತಗಳನ್ನು ಸಾಮಜಿಕ ಜಾಲತಾಣಗಳ ಮೂಲಕ ಹಂಚಿಕೊಳ್ಳಬಾರದು, ಇವುಗಳನ್ನು ಕಿಡಿಗೇಡಿಗಳು ಅಪರಾಧ ಚಟುವಟಿಕೆಗಳಿಗೆ ಬಳಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ ಎಂದು  ಸಲಹೆ ನೀಡಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಂದಿನಿ ಮಾತನಾಡಿ ವಿದ್ಯಾರ್ಥಿಗಳು ದ್ವಿಚಕ್ರ ಚಾಲನೆ ಮಾಡುವಾಗ  ಹಿಂಬದಿಯ ಸವಾರರೂ ಸೇರಿದಂತೆ ಇಬ್ಬರೂ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು, ಕೋವಿಡ್-19ನಲ್ಲಿ ಉಂಟಾದ ಸಾವು ನೋವುಗಳಿಗಿಂತ ಹೆಚ್ಚಾಗಿ ರಸ್ತೆ ಅಪಘಾತಗಳಲ್ಲಿ ಸಾವೀಗೀಡಾಗುತ್ತಿರುವ ಸಂಖ್ಯೆಯೇ  ಅಂಕಿ-ಅಂಶಗಳ ಪ್ರಕಾರ ಅಧಿಕವಾಗಿದೆ, ಅಲ್ಲದೇ ವಾಹನಗಳಿಗೆ ಸಂಬಂಧಿಸಿದ ನವೀಕರಿಸಿದ ವಾಹನ ವಿಮಾಪತ್ರ, ಚಾಲನಾ ಪರವಾನಗಿ ಸೇರಿದಂತೆ ಇತರ ಎಲ್ಲಾ ಅವಶ್ಯಕ ದಾಖಲಾತಿಗಳನ್ನು ಸರಿಯಾಗಿ ಇಟ್ಟುಕೊಂಡಿರಬೇಕು ಎಂದು ಸಲಹೆ ನೀಡಿದರು.

ಜಾಗೃತಿ ಕಾರ್ಯಗಾರದಲ್ಲಿ ಮೈಸೂರು ದಕ್ಷಿಣ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಶಿವಾನಂದಶೆಟ್ಟಿ, ವರುಣಾ  ಠಾಣಾ ಉಪ ನಿರೀಕ್ಷಕ ಚೇತನ್ ಕಾನೂನು ಮತ್ತು ಅಪರಾಧಗಳ ಕುರಿತು ಮಾತನಾಡಿದರು. ಎಟಿಎಂಇ ಆಡಳಿತ ಮಂಡಳಿ ಕಾರ್ಯದರ್ಶಿ ಕೆ. ಶಿವಶಂಕರ್, ಪ್ರಾಂಶುಪಾಲ ಡಾ.ಎ.ಕೆ.ಮೂರ್ತಿ, ಐಕ್ಯೂಎಸಿ ನಿರ್ದೇಶಕ ಡಾ.ಬಸವರಾಜ್ ಎಲ್, ಆಡಳಿತಾಧಿಕಾರಿ ಡಾ.ಸಚ್ಚಿದಾನಂದಮೂರ್ತಿ, ಡೀನ್‌ಗಳಾದ ಡಾ.ಭಾಗ್ಯಶ್ರೀ ಎಸ್.ಆರ್, ಡಾ.ಎಂಎಸ್. ಗೋವಿಂದೇಗೌಡ, ಸಿಐಸಿಸಿ ಸದಸ್ಯ ಚಂದ್ರಶೇಖರ್, ಎನ್.ಎಸ್.ಎಸ್. ಅಧಿಕಾರಿ ರುದ್ರೇಶ್.ಎ.ಎನ್,   ಜಸ್ಲೀನ್ ಎಫ್, ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು, ವಿದ್ಯಾರ್ಥಿಗಳು  ಹಾಗೂ ಸಿಬ್ಬಂದಿ ಇದ್ದರು.

Ashika S

Recent Posts

ಮೇ 18ರವರೆಗೆ ರಾಜ್ಯದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ: ಹವಾಮಾನ ಇಲಾಖೆ

ಮೇ 18ರವರೆಗೆ ರಾಜ್ಯದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಮುಂದಿನ ಐದು ದಿನಗಳ…

5 mins ago

ಹರೇಕಳದಲ್ಲಿ ಹಾಜಬ್ಬರ ಕನಸಿನ ಪದವಿಪೂರ್ವ ಶಿಕ್ಷಣ ಆರಂಭ

ತಾನು ಅನಕ್ಷರಸ್ಥನಾದರೂ ತನ್ನ ಊರಿನ ಮಕ್ಕಳು ವಿದ್ಯೆಯಿಂದ ವಂಚಿತರಾಗಬಾರದು ಎಂಬ ಉದ್ದೇಶದೊಂದಿಗೆ ಹರೇಕಳ ಹಾಜಬ್ಬರು ಕಿತ್ತಲೆ ಹಣ್ಣು ಮಾರಾಟ ಮಾಡಿ…

10 mins ago

ಪೆನ್‌ ಡ್ರೈವ್‌ ಪ್ರಕರಣ: ‘ಕುಮಾರಣ್ಣ ಯಾವ ತಿಮಿಂಗಿಲವನ್ನಾದರೂ ಹಿಡಿದು ಅವರೇ ನುಂಗಿಕೊಳ್ಳಲಿ’

ಪೆನ್‌ ಡ್ರೈವ್‌ ಪ್ರಕರಣದಲ್ಲಿ ಕುಮಾರಣ್ಣ ಯಾವ ತಿಮಿಂಗಿಲವನ್ನಾದರೂ ಹಿಡಿದು ಅವರೇ ನುಂಗಿಕೊಳ್ಳಲಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.

26 mins ago

ಅಮೆರಿಕದ ವೈಟ್ ಹೌಸ್ ನಲ್ಲಿ ಮೊಳಗಿದ ಸಾರೆ ಜಹಾನ್‌ ಸೇ ಅಚ್ಚಾ

ಅಮೆರಿಕದ ವೈಟ್ ಹೌಸ್ ನಲ್ಲಿ ಆಯೋಜಿಸಲಾಗಿದ್ದ ಏಷಿಯನ್‌ ಅಮೆರಿಕನ್‌, ಸ್ಥಳೀಯ ಹವಾಯಿಯನ್‌ ಮತ್ತು ಪೆಸಿಫಿಕ್‌ ಐಲ್ಯಾಂಡರ್‌ ಪಾರಂಪರ್ಯ ಮಾಸಾಚರಣೆ ಕಾರ್ಯಕ್ರಮದಲ್ಲಿ…

42 mins ago

ವಿಮಾನದಲ್ಲಿ ಪ್ರಯಾಣಿಕರ ಬ್ಯಾಗ್​ನಿಂದ ಬೆಲೆಬಾಳುವ ವಸ್ತು ಕಳ್ಳತನ: ಆರೋಪಿಗಳು ವಶಕ್ಕೆ

ವಿಮಾನಗಳಲ್ಲಿ ಪ್ರಯಾಣಿಸುತ್ತಿದ್ದ ಸಹ ಪ್ರಯಾಣಿಕರ ಕೈ ಚೀಲಗಳಿಂದ ಚಿನ್ನಾಭರಣ ಇನ್ನಿತರ ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದ ವ್ಯಕ್ತಿಯನ್ನು ದೆಹಲಿ ಪೊಲೀಸರು…

44 mins ago

ಮಕ್ಕಳ ಗೌಪ್ಯತೆ ಕಾಪಾಡಿದ್ದಕ್ಕೆ ಪಾಪ್ಸ್‌ಗೆ ದುಬಾರಿ ಗಿಫ್ಟ್ ಹ್ಯಾಂಪರ್ ಕೊಟ್ಟ ವಿರುಷ್ಕಾ

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿ ತಮ್ಮ ಮಕ್ಕಳ ಗೌಪ್ಯತೆ ಕಾಪಾಡಿಕೊಂಡು ಬಂದಿರುವುದರ ಗೌರವಾರ್ಥ ಪಾಪಾರಾಜಿಗಳಿಗೆ ದುಬಾರಿ ಉಡುಗೊರೆ…

1 hour ago