ಮೈಸೂರು: ಕಳಪೆ ಕಾಮಗಾರಿಗಳ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ವಿಧಾನ ಪರಿಷತ್ ಸದಸ್ಯರು ಹಾಗೂ ಸಿಎಂ ಪುತ್ರ ಡಾ.ಯತೀಂದ್ರ ರಿಂದ ಜಿಲ್ಲಾ ಪಂಚಾಯ್ತಿ ಸಿಇಓ ಗೆ ಪತ್ರ ಬರೆದು ಮೂರು ತಿಂಗಳಾದ್ರೂ ಕ್ರಮ ಕೈಗೊಂಡಿಲ್ಲದಿರುವ ಪ್ರಕರಣ ಬೆಳಕಿಗೆ ಬಂದಿದೆ.

ಸೆಪ್ಟೆಂಬರ್ 3 ರಂದು ಡಾ.ಯತೀಂದ್ರ ರವರ ಪತ್ರ ಸಿಇಓ ಗೆ ಬರೆದಿರುವ ಪತ್ರಕ್ಕೆ ಡೋಂಟ್ ಕೇರ್.ತಾಂಡವಪುರ ಗ್ರಾಮ ಪಂಚಾಯ್ತಿಯಲ್ಲಿ 2020 ರಿಂದ 2025 ರವರೆಗೆ ನಡೆದಿರುವ ಚರಂಡಿ, ಡಕ್,ಸಿಸಿ ರಸ್ತೆ, ಕಾಂಪೌಂಡ್, ನೈರ್ಮಲ್ಯ ವಿಚಾರದ ಕಾಮಗಾರಿಗಳು ಕಳಪೆ ಗುಣಮಟ್ಟದ್ದಾಗಿದೆ.

ಕೆಲವು ಕಾಮಗಾರಿಗಳು ಪೂರ್ಣಗೊಂಡಿಲ್ಲ.ಈ ಕುರಿತಂತೆ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ಡಾ.ಯತೀಂದ್ರ ರವರು ಸಿಇಓ ಗೆ ಪತ್ರ ಬರೆದಿದ್ದಾರೆ. ಈಗಾಗಲೇ ಪತ್ರ ಬರೆದು ಮೂರು ತಿಂಗಳಾಗಿದ್ದರೂ ಕ್ರಮ ಕೈಗೊಂಡ ಬಗ್ಗೆ ಮಾಹಿತಿ ಇಲ್ಲ. ಸಿಎಂ ಪುತ್ರ ಹಾಗೂ ಎಂಎಲ್ಸಿ ಪತ್ರಕ್ಕೇ ಸ್ಪಂದನೆ ಸಿಗದಿದ್ರೆ ಜನಸಾಮಾನ್ಯರ ಪಾಡೇನು.

ಕೋಟ್ಯಾಂತರ ಹಣ ದುರುಪಯೋಗವಾಗಿದೆ ಎಂಬ ಆರೋಪಗಳಿವೆ.ಗ್ರಾಮಸ್ಥರ ಮನವಿಗೆ ಸ್ಪಂದಿಸಿ ಯತೀಂದದ್ರ ಪತ್ರ ಬರೆದರೆ ಸಿಇಓ ಮೌನಕ್ಕೆ ಶರಣಾಗಿರುವುದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.ಪತ್ರವನ್ನ ಗೌಪ್ಯವಾಗಿಡುವ ಉದ್ದೇಶವಾದ್ರೂ ಏನು ಎಂಬ ಪ್ರಶ್ನೆ ಉದ್ಭವಿಸಿದೆ.ಇನ್ನಾದರೂ ಸಿಇಓ ಮೌನ ಮುರಿದು ಕ್ರಮ ಕೈಗೊಳ್ಳುವರೇ…?.