ಮೈಸೂರು: ರಾಷ್ಟ್ರೀಯ ಲಾಂಛನ,ಬಾವುಟ,ಹೆಸರು,ಲೋಗೋ,ಮೊಹರು,ಸ್ಟಿಕ್ಕರ್ ಗಳನ್ನ ಅನಧಿಕೃತವಾಗಿ ಬಳಸಿ ದುರ್ಬಳಕೆ ಮಾಡುವವರ ವಿರುದ್ದ ಕ್ರಮ ಕೈಗೊಳ್ಳುವಂತೆ ಕೇಂದ್ರ ಗ್ರಾಹಕ ಸಚಿವಾಲಯ ಎಲ್ಲಾ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.

ದುರ್ಬಳಕೆ ಆಗದಂತೆ ಎಚ್ಚರಿಕೆ ವಹಿಸಬೇಕು ಹಾಗೂ ಜಾಗೃತಿ ಮೂಡಿಸುವಂತೆ ಸೂಚನೆ ನೀಡಿದೆ.ನಾಲ್ಕು ವಾರಗಳ ಗಡುವು ನೀಡಿರುವ ಸರ್ಕಾರ ತೆರುವುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಹಾಗೂ ನಿಯಮಗಳನ್ನ ಕಟ್ಟುನಿಟ್ಟಾಗಿ ಪಾಲಿಸುವಂತೆ ಆದೇಶಿಸಿದೆ.

ಶಾಲಾ ಮಕ್ಕಳು ಹಾಗೂ ಮಾಧ್ಯಮಗಳನ್ನ ಬಳಸಿಕೊಂಡು ಜಾಗೃತಿ ಮೂಡಿಸುವಂತೆ ಸಲಹೆ ನೀಡಿದೆ.ದುರ್ಬಳಕೆ ಮಾಡುವವರ ವಿರುದ್ದ ಸಂಭಂಧಿಸಿದ ಕಾಯ್ದೆಗಳ ಅನ್ವಯ ದಂಡ ವಿಧಿಸುವುದು ಅಥವಾ ಪರವಾನಗಿ ರದ್ದುಪಡಿಸುವ ಕುರಿತಂತೆ ಆದೇಶದಲ್ಲಿ ತಿಳಿಸಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಸಂದೀಪ್ ರವರು ಸುತ್ತೋಲೆ ಹೊರಡಿಸಿದ್ದಾರೆ.