ಮೈಸೂರು: ಶ್ರೀ ಗಣೇಶ ಕಲ್ಚರ್ ಅಂಡ್ ಎಜುಕೇಶನ್ ಟ್ರಸ್ಟ್ ಮತ್ತು ಲಿಟಲ್ ಸ್ಟಾರ್ ಕಿಂಡರ್ ಗಾರ್ಡನ್ ವತಿಯಿಂದ ಕೆ ಆರ್ ಎಸ್ ರಸ್ತೆಯಲ್ಲಿರುವ ದಯಾಶಂಕರ ವೃದ್ಧಾಶ್ರಮ ಮತ್ತು ಪ್ರಕೃತಿ ವೃದ್ಧಾಶ್ರಮದಲ್ಲಿರುವ ವೃದ್ಧರಿಗೆ ಸ್ವೆಟರ್ ಮತ್ತು ಮಫ್ಲರ್ ವಿತರಿಸಲಾಯಿತು.
ವೃದ್ಧಾಶ್ರಮಗಳಲ್ಲಿ ಆಶ್ರಯ ನೀಡಿರುವ ವೃದ್ಧರಿಗೆ ಸ್ವೆಟರ್ ಮತ್ತು ಮಫ್ಲರ್ ವಿತರಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷರಾದ ಶೋಭಾ ರಾಣಿ ಚಳಿ, ಗಾಳಿ ಹೆಚ್ಚಿರುವ ಹಿನ್ನೆಲೆಯಲ್ಲಿ ವೃದ್ಧಾಶ್ರಮದ ವೃದ್ಧರು ಸ್ವೆಟರ್ ಮತ್ತು ಮಫ್ಲರ್ ರನ್ನು ಉಪಯೋಗಿಸಿಕೊಳ್ಳಬೇಕು. ಅದೇ ರೀತಿ ಆರೋಗ್ಯದ ಬಗ್ಗೆ ಗಮನ ನೀಡಬೇಕೆಂದು ಮನವಿ ಮಾಡಿದರು.

ಚಳಿಗಾಲದೊಂದಿಗೆ ಚಂಡಮಾರುತಗಳ ಪ್ರಭಾವದಿಂದ ಪ್ರಸ್ತುತ ದಿನಗಳಲ್ಲಿ ಚಳಿಯೊಂದಿಗೆ ವಾತಾವರಣ ಹೆಚ್ಚಾಗುತ್ತಿದ್ದು ಶೀತದ ವಾತಾವರಣ ಹೆಚ್ಚಾಗುತ್ತಿದ್ದು, ಈ ನಿಟ್ಟಿನಲ್ಲಿ ಬಡವರಿಗೆ ಕೈಲಾದ ಸಹಾಯಮಾಡಬೇಕೆಂದು ಉದ್ದೇಶದಿಂದ ಈ ಸಣ್ಣ ಸೇವೆಯನ್ನು ಮಾಡುತ್ತಿದ್ದೇವೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಸಂಸ್ಥೆಯ ಮಮತಾ, ರೂಪ, ಶಿವು, ಜಯಂತಿ ,ಮಧು, ಕಾರ್ತಿಕ್ ಹಾಗೂ ಇನ್ನಿತರರು ಹಾಜರಿದ್ದರು.

