ಮೈಸೂರು: ರಸ್ತೆ ಬದಿ ಮಲಗುವ ನಿರಾಶ್ರಿತರಿಗೆ ಹೊದಿಕೆ ವಿತರಿಸುವ ಸೇವಾ ಮನೋಭಾವದ ಕಾರ್ಯವನ್ನು ಮುಂದುವರೆಸಿರುವ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ನ ಪದಾಧಿಕಾರಿಗಳು ರೈಲ್ವೆ ನಿಲ್ದಾಣ ಹಾಗೂ ಬಸ್ ನಿಲ್ದಾಣ ಹಾಗೂ ಸುತ್ತ ಮತ್ತಲಿನಲ್ಲಿ ಮಲಗಿರುವ ನಿರಾಶಿತ ಜನರಿಗೆ ಹೊದಿಕೆ ವಿತರಿಸಿ ಗಮನಸೆಳೆದರು.
ಈಗಾಗಲೇ ಚಳಿ ಆರಂಭವಾಗಿದ್ದು, ಬಹಳಷ್ಟು ನಿರಾಶ್ರಿತರು ರಾತ್ರಿಯಾಗುತ್ತಿದ್ದಂತೆಯೇ ರೈಲ್ವೆ, ಬಸ್ ನಿಲ್ದಾಣದ ಬಳಿ ಮಲಗುತ್ತಾರೆ. ಹೀಗೆ ಮಲಗುವವರು ಸೂಕ್ತ ಹೊದಿಕೆಯಿಲ್ಲದೆ ಚಳಿಯಲ್ಲಿ ನಡಗುತ್ತಿರುತ್ತಾರೆ. ಇಂತಹ ನಿರಾಶ್ರಿತರನ್ನು ಗುರುತಿಸಿ ಅವರಿಗೆ ಹೊದಿಕೆ ನೀಡುವ ಕೆಲಸವನ್ನು ಕೆಎಂಪಿಕೆ ಟ್ರಸ್ಟ್ ನ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ಅವರ ನೇತೃತ್ವದಲ್ಲಿ ಮಾಡಲಾಗುತ್ತಿದ್ದು, ಪ್ರತಿವಾರವೂ ಈ ಕೆಲಸವನ್ನು ಮಾಡಲಾಗುತ್ತಿದೆ.
ಈ ಕುರಿತಂತೆ ಮಾತನಾಡಿರುವ ಟ್ರಸ್ಟ್ ನ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ಇದೀಗ ಚಳಿ ಪ್ರಾರಂಭವಾಗಿದ್ದು, ವಾತಾವರಣದಲ್ಲಿನ ಉಷ್ಣಾಂಶ ಕಡಿಮೆಯಾಗಿ, ತಂಪಾದ ವಾತಾವರಣ ಕಂಡುಬರುತ್ತದೆ. ಈ ಸಂದರ್ಭದಲ್ಲಿ ದೇಹಕ್ಕೆ ವಿವಿಧ ರೀತಿಯ ತೊಂದರೆಗಳಾಗುತ್ತವೆ. ಆದ್ದರಿಂದ ಮುಂಜಾಗ್ರತೆ ತೆಗೆದುಕೊಳ್ಳುವುದು ಅಗತ್ಯವಾಗಿದೆ ಎಂಬುದನ್ನು ನಿರಾಶ್ರಿತರಿಗೆ ಮನದಟ್ಟು ಮಾಡಿಕೊಡಲಾಗುತ್ತಿದೆ ಎಂದರು.
ಈ ಸೇವಾ ಕಾರ್ಯಕ್ಕೆ ರಾಷ್ಟ್ರೀಯ ವಿಶೇಷ ಚೇತನ ಕ್ರೀಡಾಪಟು ಅಲೋಕ್ ಆರ್.ಜೈನ್ ಮಹಾನ್ ಶ್ರೆಯಸ್, ಬೈರತಿ ಲಿಂಗರಾಜು, ಮಂಜುನಾಥ್, ಸಚಿನ್ ನಾಯಕ್, ಸೇರಿದಂತ ಇನ್ನಿತರರು ಕೈ ಜೋಡಿಸಿರುವುದಾಗಿ ತಿಳಿಸಿದ್ದಾರೆ.

