ಮೈಸೂರು : ಜಮೀನಿಗೆ ನೀರು ಬಿಡುವ ವಿಚಾರಕ್ಕೆ ಕಿರಿಕ್ ನಡೆದು ಕೈಯಲ್ಲಿದ್ದ ಗುದ್ದಲಿಯಿಂದ ಮಾರಣಾಂತಿಕ ಹಲ್ಲೆ ನಡೆಸಲು ಮುಂದಾದ ವಿಡಿಯೋ ವೈರಲ್ ಆಗಿದೆ. ಸಾಲಿಗ್ರಾಮ ತಾಲೂಕಿನಲ್ಲಿ ಈ ಘಟನೆ ಸಂಭವಿಸಿದೆ.
ಕುಮಾರ್ ಹಲ್ಲೆಗೊಳಗಾದ ವ್ಯಕ್ತಿ. ಹರೀಶ್ ಎಂಬಾತನಿಂದ ಗುದ್ದಲಿಯಿಂದ ಹಲ್ಲೆ ನಡೆಸಲಾಗಿದೆ. ಆರೋಪಿ ಹರೀಶ್, ಮಹೇಶ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಸಾಲಿಗ್ರಾಮದ ಸರ್ವೆ ನಂ.148/1 ರಲ್ಲಿ ಒಂದು ಎಕರೆ ಗದ್ದೆಯನ್ನು ಗಾಯಾಳು ಹೊಂದಿದ್ದನು.
ಪಕ್ಕದ ಗದ್ದೆ ಗುತ್ತಿಗೆ ಪಡೆದಿದ್ದ ಆರೋಪಿ ಹರೀಶ್ ಎಂಬಾತರಿಗೆ ಸೇರಿದ್ದಾಗಿದೆ. ದೊಡ್ಡ ಕಾಲುವೆಯಿಂದ ಗದ್ದೆಗೆ ನೀರು ಹಾಯಿಸಲು ಬದು ಕೆತ್ತುತ್ತಿದ್ದ ಕುಮಾರ್. ಈ ವೇಳೆ ಮಾತಿನ ಚಕಮಕಿ ನಡೆದು ಗುದ್ದಲಿಯಿಂದ ಹರೀಶ್ ನಿಂದ ಹಲ್ಲೆ ನಡೆಸಲಾಗಿದೆ. ಹಲ್ಲೆಗೆ ಸಾಥ್ ನೀಡಿದ ಆರೋಪದಲ್ಲಿ ಹರೀಶ್, ಮಹೇಶ್ ವಿರುದ್ಧ ಎಫ್ಐಆರ್ ಸಾಲಿಗ್ರಾಮ ಠಾಣೆಯಲ್ಲಿ ದಾಖಲಾಗಿದೆ.

