ನಂಜನಗೂಡು : ನಂಜನಗೂಡು ನಗರದ ಹೃದಯ ಭಾಗದಲ್ಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ದಿನನಿತ್ಯ ನೂರಾರು ರೋಗಿಗಳು ಗರ್ಭಿಣಿ ಮತ್ತು ಬಾಣಂತಿಯರು ಸಾಕಷ್ಟು ಸಂಖ್ಯೆಯಲ್ಲಿ ಧಾವಿಸುತ್ತಾರೆ. ಆದರೆ ದುರಂತ ಒಳಗೆ ಧಾವಿಸಬೇಕಾದರೆ ದುಸ್ಸಾಹಸವನ್ನೆ ಪಡಬೇಕಾಗಿರುವ ಘಟನೆ ನಡೆಯ ತೊಡಗುತಿದೆ.

ಆಸ್ಪತ್ರೆಯ ಮುಂಭಾಗದಲ್ಲಿ ದ್ವಿಚಕ್ರ ವಾಹನ ಸವಾರರು ಅಡ್ಡಾದಿಡ್ಡಿ ವಾಹನಗಳನ್ನು ನಿಲ್ಲಿಸಿ ರೋಗಿಗಳಿಗೆ ಸಮಸ್ಯೆ ತಂದೊಡ್ಡಿದ್ದಾರೆ. ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಧಾವಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಕಾರ್ಖಾನೆಗೆ ತೆರಳುವ ಕಾರ್ಮಿಕರು ಮತ್ತು ಪಟ್ಟಣದಲ್ಲಿ ವೈಯಕ್ತಿಕ ಕೆಲಸ ಕಾರ್ಯಗಳಿಗೆ ದಾವಿಸುವ ಸಾರ್ವಜನಿಕರು ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಮುಂಭಾಗದಲ್ಲಿ ದ್ವಿಚಕ್ರ ವಾಹನಗಳನ್ನು ಅಡ್ಡಾದಿಡ್ಡಿ ನಿಲ್ಲಿಸಿ ದ್ವಿಚಕ್ರ ವಾಹನಗಳ ನಿಲ್ದಾಣವನ್ನಾಗಿ ನಿರ್ಮಿಸಿಕೊಂಡಿದ್ದಾರೆ. ಸಂಚಾರಿ ಪೊಲೀಸರಿಗೆ ಹಲವು ಬಾರಿ ಕ್ರಮ ಕೈಗೊಂಡು ಸುಲಲಿತ ವ್ಯವಸ್ಥೆಗೆ ದಾರಿ ಮಾಡಿಕೊಡಲು ಸಾರ್ವಜನಿಕ ರೋಗಿಗಳು ಮನವಿ ಮಾಡಿದ್ದಾರೆ.

ಆದರೂ ಕೂಡ ಸಂಚಾರಿ ಪೊಲೀಸರು ನಮಗೂ ಇದಕ್ಕೂ ಸಂಬಂಧವೇ ಇಲ್ಲ ಎಂಬಂತೆ ನಿರ್ಲಕ್ಷತನ ತೋರುತ್ತಿದ್ದಾರೆ. ಗರ್ಭಿಣಿ ಮತ್ತು ಬಾಣತಿಯರಿಗೆ ಸಮಸ್ಯೆಯಾಗಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಪಾರ್ಕಿಂಗ್ ಸ್ಥಳದ ಅಡ್ಡ ದಿಡ್ಡಿ ವಾಹನಗಳ ವಿರುದ್ಧ ಕ್ರಮಕ್ಕೆ ಉನ್ನತ ಮಟ್ಟದ ಅಧಿಕಾರಿಗಳು ಮುಂದಾಗಬೇಕಿದೆ.