ಮೈಸೂರು: ಅವಧಿ ಮೀರಿದ ಮದ್ಯವನ್ನು ನಾಶ ಮಾಡಿದ ಘಟನೆ ಮೈಸೂರಿನಲ್ಲಿ ನಡೆದಿದೆ. ಕೂರ್ಗಳ್ಳಿಯಲ್ಲಿರುವ ಕೆಎಸ್ ಬಿಸಿಎಲ್ ಡಿಪೋ 1 ಮತ್ತು 2 ರ ಮದ್ಯದ ಮಳಿಗೆಯಲ್ಲಿದ್ದ ಮದ್ಯ ನಾಶಪಡಿಸಲಾಗಿದೆ.

8870 ಲೀಟರ್ ಬಿಯರ್, 1216 ಲೀಟರ್ ವೈನ್ ನಾಶ ಪಡಿಸಿದ್ದು, ಸುಮಾರು 24 ಲಕ್ಷ ಮೌಲ್ಯದ ಮದ್ಯ ನಾಶ ಮಾಡಲಾಗಿದೆ. ಅಬಕಾರಿ ಉಪಯುಕ್ತ ವಿವೇಕ್ ಅವರ ಆದೇಶದ ಮೇರೆಗೆ ಅಬಕಾರಿ ಇಲಾಖೆ ಅಧಿಕಾರಿ, ಸಿಬ್ಬಂದಿಗಳ ಸಮ್ಮುಖದಲ್ಲಿ ನಾಶ ಮಾಡಲಾಯಿತು.