ನಂಜನಗೂಡು: ರೈಲ್ವೆ ಮೇಲ್ಸೇತುವೆಗೆ ವಿ. ಶ್ರೀನಿವಾಸ್ ಪ್ರಸಾದ್ ಹೆಸರಿಡುವಂತೆ ಆಗ್ರಹಿಸಿ ಮಾಜಿ ಸಂಸದ ದಿವಂಗತ ಧ್ರುವನಾರಾಯಣ್ ನಾಮಕರಣಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ನಂಜನಗೂಡಿನಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಶ್ರೀನಿವಾಸ್ ಪ್ರಸಾದ್ ಅಭಿಮಾನಿಗಳ ಬಳಗದಿಂದ ಪೂರ್ವಭಾವಿ ಸಭೆ ನಡೆಸಲಾಯಿತು.
ಆ.06 ರಂದು ಮಾಜಿ ಸಂಸದ ದಿವಂಗತ ವಿ.ಶ್ರೀನಿವಾಸ್ ಪ್ರಸಾದ್ ರವರ ಹುಟ್ಟು ಹಬ್ಬ ಆಚರಣೆ ಹಿನ್ನೆಲೆ ನಂಜನಗೂಡಿನ ಪ್ರವಾಸಿ ಮಂದಿರದಲ್ಲಿ ಪೂರ್ವಭಾವಿ ಸಭೆ ನಡೆಸಿದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಿ. ಚಿಕ್ಕರಂಗನಾಯಕ ನೇತೃತ್ವದಲ್ಲಿ ಸಭೆ ನಡೆಯಿತು.
ಸಾಮಾಜಿಕ ನ್ಯಾಯ, ರಾಜಕೀಯ ಬದ್ಧತೆ, ಅವರ ಆದರ್ಶಗಳು ಜೀವಂತವಾಗಿವೆ. ಶ್ರೀನಿವಾಸ್ ಪ್ರಸಾದ್ ರವರು ನಂಜನಗೂಡಿಗೆ ಸಾಕಷ್ಟು ಅನುದಾನವನ್ನು ತಂದು ಅಭಿವೃದ್ಧಿಪಡಿಸಿದ್ದಾರೆ. ಮೈಸೂರು ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿಯ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಅವರ ಪಾತ್ರ ಮಹತ್ವವಾಗಿದೆ. ರೈಲ್ವೆ ಮೇಲ್ಸೇತುವೆ ಶ್ರೀನಿವಾಸ್ ಪ್ರಸಾದ್ ರವರ ಹೆಸರನ್ನು ನಾಮಕರಣ ಮಾಡಬೇಕು.
ಮಾಜಿ ಸಂಸದ ದಿವಂಗತ ಧ್ರುವನಾರಾಯಣ್ ರವರ ಹೆಸರನ್ನು ನಾಮಕರಣಕ್ಕೆ ವಿರೋಧ ವ್ಯಕ್ತವಾಯಿತು. ಕೆಲವು ಸಮಯ ಗದ್ದಲದ ಗೂಡಾಗಿ ಮಾರ್ಪಟ್ಟಿತು. ಬಿಜೆಪಿ ಕಾರ್ಯಕರ್ತರು ಮತ್ತು ಶ್ರೀನಿವಾಸ್ ಪ್ರಸಾದ್ ಅಭಿಮಾನಿಗಳು ನಂಜನಗೂಡಿನ ನಗರಸಭೆಗೆ ತೆರಳಿ ಶ್ರೀನಿವಾಸ್ ಪ್ರಸಾದ್ ರವರ ಹೆಸರಿಡುವಂತೆ ಮನವಿ ಮಾಡಲಾಯಿತು.
ನಗರಸಭಾ ಅಧ್ಯಕ್ಷ ಶ್ರೀಕಂಠ ಮತ್ತು ನಗರಸಭಾ ಆಯುಕ್ತರಿಗೆ ಮನವಿ ಸಲ್ಲಿಕೆ ಮಾಡಲಾಯಿತು. ಈ ವೇಳೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಚಿಕ್ಕ ರಂಗನಾಯಕ, ನಗರಸಭಾ ಸದಸ್ಯರಾದ ಮಹದೇವ ಪ್ರಸಾದ್, ಮಹೇಶ್ ಅತ್ತಿಖಾನೆ, ಬಿಜೆಪಿ ಮಂಡಲದ ಅಧ್ಯಕ್ಷ ಕೆಂಡಗಣ್ಣಪ್ಪ, ಬಿಜೆಪಿ ಪಟ್ಟಣ ಅಧ್ಯಕ್ಷ ಸಿದ್ದರಾಜು, ಚಂದ್ರು, ರಾಜು, ಮಂಜು, ಪರಶಿವಮೂರ್ತಿ, ಬದನವಾಳು ರಾಮು, ಕೃಷ್ಣಪ್ಪ ಸೇರಿದಂತೆ ಹಲವರು ಭಾಗಿಯಾಗಿದ್ದರು.

