ತಿ. ನರಸೀಪುರ: ಜಡ್ಜಿಸ್ಟ್ ನಾಗಮೋಹನ್ ದಾಸ್ ರವರ ಒಳ ಮೀಸಲಾತಿ ವರದಿ ಅವೈಜ್ಞಾನಿಕವಾಗಿದ್ದು ಈ ವರದಿ ರದ್ದುಪಡಿಸಬೇಕೆಂದು ಆಗ್ರಹಿಸಿ ಪಟ್ಟಣದ ಕರ್ನಾಟಕ ಪ್ರದೇಶ ದಲಿತ ಜಾಗೃತಿ ಸಮಿತಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಲಾಯಿತು.

ಸುದ್ದಿಗೋಷ್ಠಿ ಕುರಿತು ಕರ್ನಾಟಕ ಪ್ರದೇಶ ದಲಿತ ಜಾಗೃತಿ ಸಮಿತಿ ಜಿಲ್ಲಾಧ್ಯಕ್ಷ ಮಂಜುನಾಥ್ ಮಾತನಾಡಿ ಒಳ ಮೀಸಲಾತಿ ವಿರೋಧಿಸಿ ಬಲಗೈ ಸಮುದಾಯ ನಡೆಸುತ್ತಿರುವ ಹೋರಾಟಕ್ಕೆ ಸಮುದಾಯದ ಎಲ್ಲರೂ ಬೆಂಬಲಿಸಬೇಕು ಎಂದು ಕರೆ ನೀಡಿದರು.

ಜಡ್ಜಿಸ್ಟ್ ನಾಗಮೋಹನ್ ದಾಸ್ ರವರ ಒಳ ಮೀಸಲಾತಿ ವರದಿ ಅವೈಜ್ಞಾನಿಕವಾಗಿದ್ದು ಈ ವರದಿಯಿಂದ ಬಲಗೈ ಸಮುದಾಯಕ್ಕೆ ತುಂಬಾ ಅನ್ಯಾಯವಾಗುತ್ತದೆ ಇಂತಹ ಅವೈಜ್ಞಾನಿಕ ವರದಿ ರದ್ದುಪಡಿಸಬೇಕೆಂದು ಆಗ್ರಹಿಸಿ ದಿನಾಂಕ 25.3.2026 ಬುಧವಾರ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯುವ ಬೃಹತ್ ಸಮಾವೇಶಕ್ಕೆ ರಾಜ್ಯದ ಪ್ರತಿ ಗ್ರಾಮದಿಂದ ಬಲಗೈ ಸಮುದಾಯದ ಬಾಂಧವರು ಮನೆಗೊಬ್ಬರಂತೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭ ಕರ್ನಾಟಕ ಪ್ರದೇಶ ದಲಿತ ಜಾಗೃತಿ ಪ್ರಧಾನ ಕಾರ್ಯದರ್ಶಿ ತಾಯೂರು ಮಧು, ಕಾರ್ಯಧ್ಯಕ್ಷರಾದ ಕೆಬ್ಬೆಹುಂಡಿ ಕೃಷ್ಣ , ಡಾ. ಬಿ ಆರ್ ಅಂಬೇಡ್ಕರ್ ಕ್ಷೇಮಾಭಿವೃದ್ಧಿ ಕ್ರೀಡಾಕಲಾಸಂಘದ ಅಧ್ಯಕ್ಷ ಕಯ್ಯಂಬಳ್ಳಿ ಮಧು ಇದ್ದರು.