ನಂಜನಗೂಡು: ಕಬ್ಬು ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಮಾಡುವಂತೆ ಆಗ್ರಹಿಸಿ ಕೇಂದ್ರ ಸಚಿವ ವಿ ಸೋಮಣ್ಣರವರಿಗೆ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ವತಿಯಿಂದ ಮನವಿ ಸಲ್ಲಿಸಲಾಯಿತು.
ನಂಜನಗೂಡಿನಲ್ಲಿ ರೈತ ಸಂಘ ಮತ್ತು ಹಸಿರು ಸೇನೆಯ ಕಾರ್ಯಾಧ್ಯಕ್ಷ ವಿದ್ಯಾಸಾಗರ್ ನೇತೃತ್ವದಲ್ಲಿ ರೈತರು ಕಬ್ಬು ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಮಾಡುವಂತೆ ಒತ್ತಾಯಿಸಿದರು.
ವಿದ್ಯಾಸಾಗರ್ ಮಾತನಾಡಿ, ಕರ್ನಾಟಕ ಸರ್ಕಾರವು ಆಯುಕ್ತರು ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶಕರು ಬೆಂಗಳೂರು ಇವರ ಮುಖಾಂತರ 9.5 ಸಕ್ಕರೆ ಅಂಶ ಇರುವ ತನ್ನ ಕಬ್ಬಿಗೆ ಕನಿಷ್ಠ 4400 ಬೆಲೆ ನಿಗದಿ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಅದನ್ನು ಕೇಂದ್ರ ಪುರಸ್ಕರಿಸಿಲ್ಲ ಹಾಗಾಗಿ ನಮ್ಮ ವ್ಯಾಪ್ತಿಯ 9.5 ಸಕ್ಕರೆ ಅಂಶವಿರುವ ಕಬ್ಬಿಗೆ ಕೇವಲ 3290 ಬೆಲೆ ಸಿಗುತ್ತಿದ್ದು ಇದರಿಂದಾಗಿ ಕಬ್ಬು ಬೆಳೆಗಾರರಿಗೆ ತುಂಬಾ ಆರ್ಥಿಕ ನಷ್ಟ ಉಂಟಾಗುತ್ತಿದೆ.
ನಮ್ಮ ರೈತಪರ ಸಂಘಟನೆಗಳು ಕನಿಷ್ಠ ಪ್ರತಿ ಟನ್ ಕಬ್ಬಿಗೆ 5,000 ಬೆಲೆ ನಿಗದಿಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡುತ್ತಿದ್ದರು ಅದು ಸಾಧ್ಯವಾಗುತ್ತಿಲ್ಲ. ಕರ್ನಾಟಕ ಸರ್ಕಾರ ಪ್ರಾಸ್ತವಿತ ಬೆಲೆಯು ಕೂಡ ನಮಗೆ ಸಿಗುತ್ತಿಲ್ಲ ಕಾರಣ ನಮಗೆ ಇನ್ನು ತಿಳಿಯುತ್ತಿಲ್ಲ. ಕೂಡಲೇ ಕರ್ನಾಟಕ ಸರ್ಕಾರವು ಆಯುಕ್ತರು ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶಕರು ಬೆಂಗಳೂರು ಇವರು ಪ್ರಸ್ತಾಪಿಸಿರುವ ಕೇಂದ್ರ ಸರ್ಕಾರ ಒಪ್ಪಿಕೊಂಡು ಕಬ್ಬು ಬೆಳೆಗಾರರಿಗೆ ವಿತರಿಸಬೇಕು ಎಂದು ಒತ್ತಾಯಿಸಿದರು.

