ಮೈಸೂರು: ಮಾದಿಗ ಸಮುದಾಯದ ಒಳ ಮೀಸಲಾತಿ ವಿಚಾರದಲ್ಲಿ ಒಳ ಮೀಸಲಾತಿ ಪ್ರಚಾರ ಸಮಿತಿಯ ರಾಜ್ಯಾಧ್ಯಕ್ಷರಾದ ಭಾಸ್ಕರ್ ರಾವ್ ರವರು ಒಳ ಮೀಸಲಾತಿ ವಿಚಾರವನ್ನು ಕುರಿತು ಮಾತನಾಡುವ ಬರದಲ್ಲಿ ಮೈಸೂರು ಜಿಲ್ಲೆಯ ಉಸ್ತುವಾರಿ ಸಚಿವರು ಹಾಗೂ ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಹೆಚ್.ಸಿ ಮಹದೇವಪ್ಪನವರನ್ನು ಕುರಿತು ಈತ ಮಾದಿಗ ಸಮುದಾಯದ ಮನೆ ಹಾಳು ಮಾಡಿದ್ದಾನೆ ಎಂಬ ಹೇಳಿಕೆಯನ್ನ ನೀಡಿರುವುದನ್ನು ಖಂಡಿಸಿ ಸರಗೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಲಾಯಿತು.
ಸರಗೂರು ತಾಲ್ಲೂಕಿನ ಆದಿ ಕರ್ನಾಟಕ ಸಮುದಾಯಕ್ಕೆ ಭಾಸ್ಕರ್ ರವರು ಬಹಿರಂಗವಾಗಿ ಕ್ಷಮೆ ಕೇಳಬೇಕು. ಸಂಬಂಧಪಟ್ಟವರು ಅವರ ಮೇಲೆ ಕಾನೂನು ರೀತ್ಯಾ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

