ಮೈಸೂರು: ಡೀಲಿಮಿಟೇಷನ್ ಮಾಡುವ ಮೂಲಕ ದಕ್ಷಿಣ ಭಾರತಕ್ಕೆ ಮೋಸ ಮಾಡುವ ಹುನ್ನಾರ ನಡೆಯುತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಗಂಭೀರವಾಗಿ ಆರೋಪಿಸಿದ್ದಾರೆ. ಡಿಲಿಮಿಟೇಷನ್ ನಿಂದ ಭಾರತ 100 ವರ್ಷ ಹಿಂದಕ್ಕೆ ಹೋಗುತ್ತ ಎಂದು ಪ್ರಶ್ನಿಸಿದರು. ಶೇ 50 ರಷ್ಟು ಜಾಸ್ತಿ ಮಾಡುತ್ತೇವೆ ಎಂದಿದ್ದಾರೆ.
ಹಾಗಾದರೆ ದೇಶದಲ್ಲಿ ಸುಮಾರು 850 ರಷ್ಟು ಕ್ಷೇತ್ರಗಳಾಗುತ್ತವೆ. ಆದರೆ ಉತ್ತರ ಭಾರತ ರಾಜ್ಯಗಳ ಸ್ಥಾನಗಳನ್ನ ಹೆಚ್ಚಿಸಿ ದಕ್ಷಿಣ ಭಾರತದ ರಾಜ್ಯಗಳ ಸ್ಥಾನಗಳನ್ನು ಕಡಿಮೆ ಮಾಡಿ ಅಧಿಕಾರವನ್ನ ಗಟ್ಟಿ ಮಾಡಿಕೊಂಡು ಮತ್ತೆ ಅಧಿಕಾರಕ್ಕೆ ಬಿಜೆಪಿಯನ್ನು ತರುವ ನಿಟ್ಟಿನಲ್ಲಿ ಹುನ್ನಾರ ಮಾಡುತ್ತಿದ್ದಾರೆ.
ಕೇರಳದಲ್ಲಿ ಪ್ರಸ್ತುತ 20 ಕ್ಷೇತ್ರ ಇದೆ 50% ಪ್ರಕಾರ 30 ಸೀಟು ಆಗಬೇಕು,ಆದರೆ ಕೇವಲ 2 ಕ್ಷೇತ್ರ ಜಾಸ್ತಿ ಮಾಡುತಿದ್ದಾರೆ.ಉತ್ತರ ಪ್ರದೇಶದಲ್ಲಿ ಪ್ರಸ್ತುತ 80 ಸೀಟುಗಳಿವೆ ಡೀಲಿಮಿಟೇಷನ್ ಮಾಡಿ 142 ಮಾಡುತ್ತಿದ್ದಾರೆ. ಮಧ್ಯ ಪ್ರದೇಶದ 40 ಸ್ಥಾನ 62 ಸ್ಥಾನಕ್ಕೆ ಏರಿಕೆ ಮಹಾರಾಷ್ಟ್ರ, ರಾಜಸ್ಥಾನ ಹೀಗೆ ಎಲ್ಲೆಲ್ಲಿ ಬಿಜೆಪಿ ಪ್ರಾಭಲ್ಯ ಇರುವ ರಾಜ್ಯಗಳ ಕ್ಷೇತ್ರವಾರು ವಿಂಗಡನೆ ಮಾಡಿ ಸ್ಥಾನಗಳನ್ನು ಹೆಚ್ಚಿಸಿ ದಕ್ಷಿಣ ಭಾರತದ ರಾಜ್ಯಗಳ ಸ್ಥಾನಗಳನ್ನ ಕಡಿಮೆ ಪ್ರಮಾಣದಲ್ಲಿ ಹೆಚ್ಚಿಸಿ ಅಧಿಕಾರವನ್ನ ಮತ್ತೆ ಹಿಡಿದು ಮುಂದುವರೆಯುವ ಸಂಚು ನಡೆಸುತ್ತಿದ್ದಾರೆ.
1971 ರಲ್ಲಿ ಆದ ಕ್ಷೇತ್ರ ವಿಂಗಡನೆ ಪ್ರಕಾರಲೋಕಸಭಾ,ವಿಧಾನಸಭಾ ಕ್ಷೇತ್ರಗಳು ಇವೆ. ಆಗ ಜನಸಂಖ್ಯೆ ಸುಮಾರು 54 ಕೋಟಿ ಇತ್ತು.2011 ರ ಪ್ರಕಾರ 121 ಕೋಟಿ ಜನಸಂಖ್ಯೆ ಇದೆ.ಶೇ 50% ಹೆಚ್ಚುವರಿ ಸ್ಥಾನಗಳನ್ನ ಮಾಡಿದರೆ 850 ಸ್ಥಾನಗಳು ಆಗುತ್ತದೆ. ಹೀಗೆ ಹಂಚಿಕೆ ಮಾಡಿದರೆ ದಕ್ಷಿಣ ರಾಜ್ಯಗಳಿಗೆ ಅನ್ಯಾಯವಾಗುತ್ತದೆ. ದೇಶದ ಒಟ್ಟು ಜಿಡಿಪಿ 400 ಲಕ್ಷ ಕೋಟಿಯಲ್ಲಿ 40% ದಕ್ಷಿಣ ರಾಜ್ಯಗಳಿಂದಲೇ ಬರುತ್ತಿದೆ.ಜಿಎಸ್ಟಿ ಕಲೆಕ್ಷನ್ 22 ಲಕ್ಷ ಕೋಟಿ.ಸದರನ್ ಸ್ಟೇಟ್ಸ್ ಗಳಿಂದ 7.5 ಲಕ್ಷ ಕೋಟಿ ಕಲೆಕ್ಷನ್ ಆಗುತ್ತದೆ.
ಕರ್ನಾಟಕದಿಂದ ಜಿಎಸ್ಟಿ 48 ಲಕ್ಷ ಕೋಟಿ ಕೇಂದ್ರ ಸರ್ಕಾರಕ್ಕೆ ಸಂದಾಯವಾಗುತ್ತದೆ. ಕರ್ನಾಟಕಕ್ಕೆ ವಾಪಸ್ ಕೊಡುವುದು ಕೇವಲ 60 ಸಾವಿರ ಕೋಟಿ ಮಾತ್ರ. ಉತ್ತರ ಪ್ರದೇಶ ರಾಜ್ಯ ಕೇವಲ 2. ಲಕ್ಷ ಕೋಟಿ ಜಿಎಸ್ಟಿ ಕಟ್ಟುತ್ತೆ. ಆದರೆ ಅವರಿಗೆ ವಾಪಸ್ ಕೊಡೋದು 6 ಲಕ್ಷ ಕೋಟಿ.ಈ ರೀತಿ ಜಿಎಸ್ಟಿ ಹಂಚಿಕೆಯಲ್ಲೂ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತದೆ. ಈ ಡೀಲಿಮಿಟೇಷನ್ ವಿರುದ್ಧ ತಮಿಳುನಾಡಿನ ಸಿಎಂ ಸ್ಟಾಲಿನ್ ದೊಡ್ಡ ಮಟ್ಟದ ಹೋರಾಟ ಮಾಡಲು ಮುಂದಾಗಿದ್ದಾರೆ ಅವರಿಗೆ ನಮ್ಮ ಬೆಂಬಲ ಇದೆ.ಸುದ್ದಿ ಗೋಷ್ಠಿಯಲ್ಲಿ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಹೇಳಿಕೆ ನೀಡಿದರು.

