ಮೈಸೂರು : ಸಾಲ ಭಾದೆಯಿಂದ ರೈತ ವಿಷದ ಕಾಳಿನ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆಯ ಸಾಲಿಗ್ರಾಮ ತಾಲೂಕಿನ ಲಕ್ಷ್ಮಿಪುರ ಗ್ರಾಮದಲ್ಲಿ ನಡೆದಿದೆ.

ಜಮೀನಿನಲ್ಲಿ ಬಳಿ ಕಾಳಿನ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ರೈತ ಗೋವಿಂದೇಗೌಡ(45). ಮೈಸೂರಿನ ಕೆ.ಆರ್.ಅಸ್ವತ್ರೆಗೆ ಗ್ರಾಮಸ್ಥರು ದಾಖಲಿಸಿದ್ದರು. ಚಿಕಿತ್ಸೆ ಫಲಿಸದೆ ಗೋವಿಂದೇಗೌಡ ಸಾವನ್ನಪ್ಪಿದ್ದಾರೆ.

ಬಳ್ಳೂರು ಸಹಕಾರ ಸಂಘ, ಖಾಸಗಿ ಹಣಕಾಸು ಸಂಸ್ಥೆಗಳು ಮತ್ತು ಕೈ ಸಾಲ ಸೇರಿ 15 ಲಕ್ಷಕ್ಕೂ ಅಧಿಕ ರೈತ ಸಾಲ ಮಾಡಿದ್ದರು. ಸಾಲ ಭಾದೆ, ಬೆಳೆ ನಷ್ಟದಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.