ಗುಂಡ್ಲುಪೇಟೆ : ಹಳೆ ಮೈಸೂರು ಭಾಗದ ದಲಿತ ಸಮುದಾಯದ ಆಶಾಕಿರಣ ಹಾಗೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಮೂಲ ಕಾರಣೀಭೂತರಾಗಿರುವ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ದಲಿತ ಸಮುದಾಯವನ್ನ ಒಗ್ಗೂಡಿಸಿ ಅತಿ ಹೆಚ್ಚು ಮತಗಳು ಬರಲು ಶ್ರಮಿಸಿದ ಎಚ್.ಸಿ.ಮಹದೇವಪ್ಪ ಅವರಿಗೆ ಸಂಪುಟ ದರ್ಜೆ ಅಥವಾ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ದಲಿತ ಸಮುದಾಯದ ಮುಖಂಡರು ಹಾಗೂ ಅಭಿಮಾನಿಗಳು ಒತ್ತಾಯಿಸಿದರು.

ಪಟ್ಟಣದಲ್ಲಿ ಎಚ್.ಸಿ.ಮಹದೇವಪ್ಪ ಅವರ ಪೋಸ್ಟರ್ ಹಿಡಿದು ರ್ಯಾಲಿ ನಡೆಸಿದ ಅಭಿಮಾನಿಗಳು ಹಾಗೂ ಸಮುದಾಯದ ಮುಖಂಡರು ಮಹದೇವಪ್ಪ ಪರ ಘೋಷಣೆಗಳನ್ನ ಕೂಗಿ ಡಿಸಿಎಂ ಸ್ಥಾನ ಕೊಡಲೇಬೇಕು ಎಂದು ಒತ್ತಾಯಿಸಿದರು ,

ಹಳೆ ಮೈಸೂರು ಭಾಗದಲ್ಲಿ ದಲಿತ ಸಮುದಾಯದ ಪ್ರಭಾವಿ ನಾಯಕರಾಗಿರುವ ಮಹದೇವಪ್ಪ ಅವರು ಬಡವರ ಮಧ್ಯಮ ವರ್ಗದವರ ಕಷ್ಟ ಸುಖಗಳಿಗೆ ಸ್ಪಂದಿಸಿ ಉತ್ತಮ ಕೆಲಸ ಗಳನ್ನ ಮಾಡಿದ್ದಾರೆ ,ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಸಹ ಇವರ ಕೊಡುಗೆ ಬಹಳಷ್ಟಿದೆ ಎಂದು ಅಭಿಮಾನಿ ಬಳಗದ ರಾಘವಪುರ ಮಹೇಶ್ ತಿಳಿಸಿದರು.

ಹಣಬಲ , ಓಟು ಜಾತಿ ತುಷ್ಟೀಕರಣದಡಿ ರಾಜಕಾರಣ ಮಾಡುವವರ ನಡುವೆ ಎಲ್ಲಾ ಸಮುದಾಯದವರಿಗೂ ನ್ಯಾಯಸಮ್ಮತವಾಗಿ ಸ್ಪಂದಿಸುವ ಮಹದೇವಪ್ಪ ಅವರ ಜನಪ್ರಿಯತೆಯು ಸಹ ಕಾಂಗ್ರೆಸ್ ಸರ್ಕಾರಕ್ಕೆ ಶಕ್ತಿಯಾಗಿದೆ ಹಾಗಾಗಿ ಸಂಪುಟ ದರ್ಜೆ ಅಥವಾ ಡಿಸಿಎಂ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿಸಿದರು.