ಮೈಸೂರು : ಸಚಿವ ಹೆಚ್.ಸಿ ಮಹದೇವಪ್ಪಗೆ ದಲಿತ ಹೋರಾಟಗಾರರ ಖಡಕ್ ಎಚ್ಚರಿಕೆ ನೀಡಿದ್ದು, ಸಚಿವರ ವಿರುದ್ದದಲಿತ ಸಂಘರ್ಷ ಸಮಿತಿ ಮುಖಂಡರು ತಿರುಗಿ ಬಿದ್ದಿದ್ದಾರೆ. ಅಂಬೇಡ್ಕರ್ ಜಯಂತಿಯಂದು ಅಂಬೇಡ್ಕರ್ ಪುತ್ಥಳಿಗೆ ಮಾಲರ್ಪಣೆ ಮಾಡಲು ಬಿಡಲ್ಲ.! ಅಲ್ಲದೆ ನಿಮ್ಮ ದಲಿತ ವಿರೋಧಿ ನೀತಿಯ ಬಗ್ಗೆ ಕರಪತ್ರ ಮಾಡಿ ಹಂಚುತ್ತೇವೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಮೈಸೂರು ನಗರದ ಅಂಬೇಡ್ಕರ್ ಭವನ ಕಾಮಗಾರಿ ನೆನೆಗುದಿಗೆ ಹಿನ್ನಲೆಯಾಗಿ ನೆನ್ನೆ ಕಾಮಗಾರಿ ಆರಂಭಕ್ಕೆ ಒತ್ತಾಯಿಸಲು ಸಚಿವ ಮಹದೇವಪ್ಪ ಮನೆಗೆ ಮುತ್ತಿಗೆ ಯತ್ನ ಮಾಡಿದ್ದಾರೆ. ದಸಂಸ ಕಾರ್ಯಕರ್ತರನ್ನು ರಸ್ತೆ ಮಧ್ಯೆದಲ್ಲೆ ತಡೆದು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಘಟನೆಯಿಂದ ಸಚಿವರ ವಿರುದ್ದ ದಲಿತ ಮುಖಂಡರು ಸಿಡಿದೆದ್ದಿದ್ದಾರೆ. ದಸಂಸ ಕಾರ್ಯಕರ್ತರನ್ನು ತಡೆದು ಬಂಧಿಸುವಂತೆ ಮಾಡಿದ್ದು ಸಚಿವ ಮಹದೇವಪ್ಪ ರಾಜಕೀಯ ಜೀವನದ ಕಪ್ಪು ಚುಕ್ಕೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಪ್ರಿಲ್ 14 ರ ಓಳಗೆ ಅಂಬೇಡ್ಕರ್ ಭವನ ಕಾಮಗಾರಿ ಪುನರಾರಂಭಿಸಬೇಕು. ಇಲ್ಲವಾದಲ್ಲಿ ಸಚಿವರಿಗೆ ಅಂಬೇಡ್ಕರ್ ಪುತ್ಥಲಕಿಗೆ ಮಾಲರ್ಪಣೆ ಮಾಡಲು ಬಿಡಲ್ಲ.! ನಿಮ್ಮ ದಲಿತ ವಿರೋಧಿತನವನ್ನು ಕರಪತ್ರಮಾಡಿ ಹಂಚುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

