ಮೈಸೂರು: ವಿಶ್ವ ವಿಖ್ಯಾತ ನಾಡಹಬ್ಬ ದಸರಾ 2026 ವೀರನ ಹೊಸಹಳ್ಳಿಯಲ್ಲಿ ಗಜಪಡೆಗೆ ಸಚಿವ ಯತೀಂದ್ರ ಸಿದ್ದರಾಮಯ್ಯರಿಂದ ಪುಷ್ಪಾರ್ಚನೆ ಮಾಡಿ ಚಾಲನೆ ನೀಡಿದರು.
6 ಬಾರಿ ಅಂಬಾರಿ ಹೊತ್ತಿದ್ದ ಅಭಿಮನ್ಯುವಿಗೆ ಬೀಳ್ಕೊಡುಗೆ ನಡೆಯಿತು. ಅಭಿಮನ್ಯು ಆನೆಗೆ ದಸರಾಗೆ ಬರುತ್ತಿರುವ ಗಜಪಡೆಯಿಂದ ಸಲ್ಯೂಟ್ ನೀಡಲಾಯಿತು. ಮೊದಲ ಹಂತದಲ್ಲಿ ಮೈಸೂರಿಗೆ 9 ಆನೆಗಳು ಆಗಮಿಸುತ್ತಿದೆ.
ಧನಂಜಯ, ಮಹೇಂದ್ರ, ಏಕಲವ್ಯ, ಪ್ರಶಾಂತ,ಗೋಪಿ ಶ್ರೀರಾಮ, ಶ್ರೀಕಂಠ,ಲಕ್ಷ್ಮೀ, ಕಾವೇರಿ ಆನೆಗಳು. ಸುಗ್ರೀವ ಬದಲಿಗೆ ಮೊದಲ ಹಂತದಲ್ಲಿ ಶ್ರೀಕಂಠ ಆನೆ ಬರುತ್ತಿದೆ. ಗಜಪೂಜೆಯನ್ನು ಆನೆ ಪೂಜಾರಿ ಪ್ರಹ್ಲಾದ್ ನೆರವೇರಿಸಿತು. ಗಜಪಡೆಗೆ 21 ಬಗೆಯ ತಿಂಡಿ ತಿನಿಸುಗಳನ್ನು ಸಿಬ್ಬಂದಿಗಳು ತಿನಿಸಿದರು.
ಕಬ್ಬು, ಬಾಳೆ, ಚಕ್ಕುಲಿ, ಭತ್ತ ಸೇರಿ 21 ಬಗೆಯ ತಿನಿಸುಗಳಿಂದ ನೈವೇದ್ಯ ಮಾಡಲಾಯಿತು. ಗಜಪಡೆಗೆ ಡೊಳ್ಳು ಕುಣಿತ, ವೀರಗಾಸೆ, ಕಂಸಾಳೆ, ಚಂಡೆ ಸೇರಿದಂತೆ ಅನೇಕ ಕಲಾತಂಡಗಳ ಸಾಥ್ ನೀಡಲಾಯಿತು.

