ಮೈಸೂರು : ಪೆಟ್ರೋಲ್ ಬಂಕ್ ನಲ್ಲಿ ಗ್ರಾಹಕರಿಗೆ ವಂಚನೆ ಆರೋಪ ಕೇಳಿಬಂದಿದ್ದು, ಪೆಟ್ರೋಲ್ ಬಂಕ್ ಮುಂದೆ ಹೈ ಡ್ರಾಮ ಮಾಡಿರುವ ಘಟನೆ ನಂಜನಗೂಡಿನ ಗೋಳೂರು ಸರ್ಕಲ್ ಬಳಿಯ ಆಶೀರ್ವಾದ್ ಭಾರತ್ ಪೆಟ್ರೋಲ್ ಬಂಕ್ ನಲ್ಲಿ ನಡೆದಿದೆ.
ಕೊಟ್ಟ ಹಣಕ್ಕೆ ಸರಿಯಾಗಿ ಪೆಟ್ರೋಲ್ ಹಾಕುತಿಲ್ಲ ಎಂದು ಗ್ರಾಹಕರಿಂದ ತರಾಟೆ ನಡೆಸಲಾಗಿದೆ. ಗ್ರಾಹಕರಿಗೆ ಮೋಸ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಬಂಕ್ ನಲ್ಲಿ ಕೆಲಸ ಮಾಡುವ ಸಿಬ್ಬಂದಿ ವಿರುದ್ಧ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳದಲ್ಲೇ ರಿ ಹಾಕಿದ ಪೆಟ್ರೋಲನ್ನು ಗ್ರಾಹಕರು ಪರಿಶೀಲನೆ ಮಾಡಿದರು. 1 ಲೀಟರ್ ಗೆ ಸುಮಾರು 100,200 ಗ್ರಾಂ ವ್ಯತ್ಯಾಸವಿದೆ. ಸ್ಥಳಕ್ಕೆ ಬಂಕ್ ಮಾಲೀಕ ಬರುವಂತೆ ಆಗ್ರಹಿಸಲಾಗಿದೆ. ಸ್ಥಳೀಯ ಪೊಲೀಸರ ಗಮನಕ್ಕೆ ಗ್ರಾಹಕರು ತಂದರು. ಸ್ಥಳಕ್ಕೆ ನಂಜನಗೂಡು ಟೌನ್ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

