ಮೈಸೂರು : ಸಿದ್ದರಾಮಯ್ಯ ಹೆಚ್ ಸಿ ಮಹದೇವಪ್ಪ ನೋಡಲೇಬೇಕಾದ ಸ್ಟೋರಿ ಇದಾಗಿದ್ದು, ಸಿಎಂ ತವರು ಕ್ಷೇತ್ರದಲ್ಲೇ ಕೋಟ್ಯಂತರ ರೂ ತೆರಿಗೆ ಹಣ ಅಕ್ರಮ ನಡೆಯುತ್ತಿದೆ. ಸಿಎಂ ಸಿದ್ದರಾಮಯ್ಯ ಸಚಿವ ಮಹದೇವಪ್ಪನವರ ಕ್ಷೇತ್ರದಲ್ಲೇ ಭಾರಿ ಅಕ್ರಮ ನಡೆಯುತ್ತಿದ್ದು, ಟಿ ನರಸೀಪುರ ಪುರಸಭೆ ತೆರಿಗೆ ವಂಚನೆ ಪ್ರಕರಣ ನಡೆದಿದೆ.

ಬಗೆದಷ್ಟು ಬಯಲಾಗ್ತಿದೆ ಪುರಸಭೆ ಹಾಗೂ ಟಿ ಎಂ ನಂಜುಂಡಸ್ವಾಮಿ ಅಕ್ರಮಗಳು. ತೆರಿಗೆ ವಂಚನೆ ಪ್ರಕರಣಕ್ಕೆ ಆಡಿಯೋ ತಿರುವು ಕೊಟ್ಟಿದೆ. ಟಿ ನರಸೀಪುರ ಪುರಸಭೆಗೆ ಕೋಟ್ಯಂತರ ರೂ ತೆರಿಗೆ ವಂಚನೆಯನ್ನು ಟಿ ಎಂ ನಂಜುಂಡಸ್ವಾಮಿ ಮಾಡಿದ್ದಾರೆ.

ಆರೋಪಿ ನಂಜುಂಡಸ್ವಾಮಿ ರಕ್ಷಣೆಗೆ ಅಧಿಕಾರಿಗಳು ನಿಂತಿದ್ದಾರೆ. ಕೇವಲ 3,43,626 ರೂ ವಂಚನೆಯ ಮಾಹಿತಿಯನ್ನು ಪುರಸಭೆ ನೀಡಿದೆ. ಬರೋಬ್ಬರಿ 3ರಿಂದ 4ಸಾವಿರ ಖಾತೆಯನ್ನು ಪುರಸಭೆ ಅಧಿಕಾರಿಗಳು ಮಾಡಿದ್ದಾರೆ.

ಈ ಪೈಕಿ ಟಿ ಎಂ ನಂಜುಂಡಸ್ವಾಮಿ ರಿಂದಲೇ ಒಂದು ಸಾವಿರ ಖಾತೆ ಇದೆ. ಪ್ರತಿನಿತ್ಯ 10ರಿಂದ 20 ಖಾತೆಯನ್ನು ಆರೋಪಿ ಮಾಡಿಸುತ್ತಿದ್ದಾರೆ. ಗ್ರಾಪಂ ಸದಸ್ಯನಾಗಿದ್ದನಿಂದಲು ಅಕ್ರಮ ಎಸಗಿರುವ ಆರೋಪ ಕೇಳಿಬಂದಿದೆ. ಲೆಕ್ಕಕ್ಕೆ ಸಿಗದಷ್ಟು ಕೋಟ್ಯಂತರ ಹಣ ತೆರಿಗೆ ವಂಚನೆ ನಡೆಯುತ್ತಿದೆ. ಟಿ ನರಸೀಪುರ ಪುರಸಭೆ ಮುಖ್ಯಧಿಕಾರಿ ವಸಂತ ಕುಮಾರಿ ಸ್ಪೋಟಕ ಹೇಳಿಕೆ ನೀಡಿದ್ದಾರೆ.