ಮೈಸೂರು : ಮೈಸೂರಿನಲ್ಲಿ ರಾತ್ರಿ ವೇಳೆ  ಅಪರಾಧ ಕೃತ್ಯಗಳು ನಿಲ್ಲಲಿಲ್ಲ. ಪೊಲೀಸರ ನಿರಂತರ ನೈಟ್ ರೌಂಡ್ಸ್ ಇದ್ದರು ಕಳ್ಳತನಕ್ಕೆ ಯತ್ನ ನಡೆಯುತ್ತಿದೆ. ಬೈಕ್ ಕಳ್ಳತನಕ್ಕೆ ವಿಫಲ ಯತ್ನ ನಡೆಸಿರುವ ಘಟನೆ ಮೈಸೂರಿನ ದಟ್ಟಗಳ್ಳಿ ಬಡಾವಣೆಯಲ್ಲಿ ನಡೆದಿದೆ. ಕಳ್ಳತನ ಯತ್ನ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಮನೆ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕದಿಯಲು ವಿಫಲ ಯತ್ನ ನಡೆಸಿದ್ದಾರೆ. ಕಳ್ಳತನ‌ ಮಾಡಲು ಸಾಧ್ಯವಾಗದೆ ಕಳ್ಳ ವಾಪಸ್ಸಾಗಿದ್ದಾರೆ. ಕುವೆಂಪು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮತ್ತೊಂದು ಕಡೆ ರಾತ್ರಿ ಕಾರ್ಯಾಚರಣೆಯನ್ನು ಪೊಲೀಸರು ಮುಂದುವರಿಸಿದ್ದಾರೆ. ನಗರದ ವಿವಿಧ ಬಡಾವಣೆಗಳಲ್ಲಿ ಗಸ್ತು ತಪಾಸಣೆ ನಡೆಯುತ್ತಿದೆ.