ಮೈಸೂರು : ನಗರದ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಮೊ ಸಂ 145/2022 NDPS ಪ್ರಕರಣದಲ್ಲಿ ಆರೋಪಿಯಾದ ಮೊಹಮ್ಮದ್ ಅಕ್ಬರ್ @ ಅಕ್ಬರ್ 30 ವರ್ಷ ಶಾಂತಿನಗರ ಮೈಸೂರು ಈತನಿಗೆ ಮಾದಕ ವಸ್ತು ಮಾರಾಟ ಮತ್ತು ಸಾಗಾಟ ಪ್ರಕರಣದಲ್ಲಿ ಮೈಸೂರು 7 ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲವು ಜ. 24ರಂದು 4 ವರ್ಷಗಳ ಕಠಿಣ ಕಾರಾಗೃಹ ವಾಸ ಮತ್ತು 40,000 ದಂಡ ವಿಧಿಸಿ ಶಿಕ್ಷೆ ಪ್ರಕಟಿಸಿದೆ.

ದಂಡ ಕಟ್ಟಲು ವಿಫಲವಾದಲ್ಲಿ ಹೆಚ್ಚಿನ 6 ತಿಂಗಳ ಕಾರಾಗೃಹ ವಾಸ ವಿಧಿಸಿ ಅದೇಶಿಸಿದೆ. ಮಾದಕ ವಸ್ತುಗಳ ಬಳಕೆ, ಸಂಗ್ರಹಣೆ, ಸಾಗಾಣೆ ವಿಚಾರವಾಗಿ ಪೊಲೀಸರಿಗೆ ಮಾಹಿತಿಗಳನ್ನು ನೀಡಿ ಸಹಕರಿಸಲು ಸಾರ್ವಜನಿಕರಲ್ಲಿ ಕೋರಲಾಗಿದೆ.