ಮೈಸೂರು: ನಗರ ಪೊಲೀಸರಿಂದ ಮಾದಕ ವಸ್ತುಗಳ ವಿರುದ್ದ ಸಮರ ಮುಂದುವರೆದಿದೆ. ನಿನ್ನೆ ಬುಧುವಾರ ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ನೇತೃತ್ವದಲ್ಲಿ ನಗರ ವ್ಯಾಪ್ತಿಯ ಹಲವೆಡೆ ದಾಳಿ ನಡೆಸಲಾಗಿದೆ.
11 ಕಾಲೇಜ್ ಹಾಸ್ಟೆಲ್ ಗಳ, ಖಾಸಗಿ ಹಾಸ್ಟೆಲ್ ಗಳು, ಪ್ರತ್ಯೇಕವಾಗಿ ಬಾಡಿಗೆಗೆ ಪಡೆದು ತಂಗಿರುವ ವಿಧ್ಯಾರ್ಥಿಗಳ ಕೊಠಡಿಗಳ ಮೇಲೆ ದಾಳಿ ನಡೆಸಲಾಗಿದೆ.

ಗಾಂಜಾ ಸೇವನೆ ಮಾಡಿದ 140 ಶಂಕಿತರನ್ನ ವಶಕ್ಕೆ ಪಡೆಯಲಾಗಿದೆ. NDPS ಕಾಯ್ದೆ ಅನ್ವಯ ಓರ್ವನನ್ನ ಬಂಧಿಸಲಾಗಿದೆ. ಒಟ್ಟಾರೆ 860 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

