ಮೈಸೂರು : ಮೈಸೂರಿನಲ್ಲಿ ಚಿರತೆ ಸೆರೆ ಕಾರ್ಯಾಚರಣೆ ಮುಂದುವರಿದೆ. ಇನ್ಫೋಸಿಸ್‌ನಲ್ಲಿ ಚಿರತೆಗಾಗಿ ಹುಡುಕಾಟ ನಡೆಯುತ್ತಿದ್ದು, ಚಿರತೆ ಸೆರೆಗಾಗಿ ತಂಡ ರಚನೆ ಮಾಡಲಾಗಿದೆ.

ಅರಣ್ಯ ಇಲಾಖೆಯ ಚಿರತೆ ಕಾರ್ಯ ಪಡೆ, ಆನೆ ಕಾರ್ಯ ಪಡೆ ಸಿಬ್ಬಂದಿ ಮತ್ತು ಮೈಸೂರು ಪ್ರಾದೇಶಿಕ ವಿಭಾಗದ ಒಟ್ಟು 70 ಸಿಬ್ಬಂದಿ ಹಾಗೂ 70 ಇನ್ಫೋಸಿಸ್ ಸಿಬ್ಬಂದಿಗಳನ್ನು ಒಳಗೊಂಡ 12 ಜಂಟಿ ತಂಡ ರಚಿಸಲಾಗಿದೆ.

ಕಳೆದ ನಾಲ್ಕು ದಿನಗಳಿಂದ ಇಲ್ಲಿಯವರೆಗೂ ಕ್ಯಾಮೆರಾ ಟ್ರ್ಯಾಪ್ ಗಳಲ್ಲಿ, ಡ್ರೋಣ್ ಕ್ಯಾಮೆರಾ, ಕ್ಯಾಂಪಸ್ ನಲ್ಲಿನ ಸಿಸಿಟಿವಿ ಕ್ಯಾಮೆರಾಗಳಲ್ಲಿ ಯಾವುದೇ ಚಲನವಲನ, ಹೆಜ್ಜೆ ಗುರುತು ಚಿರತೆ ಇರುವಿಕೆಯ ಕುರುಹು ಕಂಡು ಬಂದಿಲ್ಲ.

ಇನ್ಫೋಸಿಸ್ ಕ್ಯಾಂಪಸ್ ಗೆ ಹೊಂದಿಕೊಂಡಂತಿರುವ ಪ್ರದೇಶಗಳಲ್ಲಿಯೂ ಕಾರ್ಯಾಚರಣೆ ನಡೆಸಲಾಗಿದೆ. ಕಾರ್ಯಾಚರಣೆಯಲ್ಲಿ Aerial search ಗಾಗಿ ಎರಡು drone ಗಳನ್ನು ಹಾಗೂ ಪಶುವೈದ್ಯಕೀಯ ತಂಡ ಬಳಕೆ ಮಾಡಲಾಗಿದೆ.

ಒಂದು ಚಿರತೆ ಕಾರ್ಯಪಡೆ ತಂಡ ಕ್ಯಾಂಪಸ್ನಲ್ಲಿ ನಿಯೋಜನೆ ಮಾಡಲಾಗಿದೆ. ಕ್ಯಾಮೆರಾ ಟ್ರ್ಯಾಪ್ ಹಾಗೂ ಸಿಸಿಟಿವಿ ಕ್ಯಾಮೆರಾ ಮಾನಿಟರಿಂಗ್ ಮುಂದುವರಿದಿದೆ. ರಾತ್ರಿ ವೇಳೆ ಮೂರು ಥರ್ಮಲ್ ಡ್ರೋನ್ ಬಳಸಿ ಏರಿಯಲ್ ಸರ್ಚ್ ಕಾರ್ಯಾಚರಣೆ ಮಾಡಲಾಗಿದೆ. ಸಿಬ್ಬಂದಿಗೆ ಇನ್ಫೋಸಿಸ್ ರಜೆ ಘೋಷಿಸಿದೆ.