ಮೈಸೂರು: ನಂಜನಗೂಡಿನಲ್ಲಿ ಶಾಸಕ ದರ್ಶನ್ ಧ್ರುವನಾರಾಯಣ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯರವರು ಕಾರ್ಯಕ್ರಮಕ್ಕೆ ಬಂದಿರುವುದು ಐತಿಹಾಸಿಕ ದಿನವಾಗಿದೆ. ಸಿಎಂ ಅವರ ಅನುದಾನದಲ್ಲಿ ಒಂದು ಕೋಟಿ ನೀಡಿದ್ದಾರೆ.
ಕ್ಷೇತ್ರಕ್ಕೆ ನೀಡಿದ್ದ ವಿಶೇಷ ಅನುದಾನದ 50 ಕೋಟಿಯಲ್ಲಿ ಒಂದು ಕೋಟಯನ್ನು ಉಪ್ಪಾರ ಸಮುದಾಯ ಭವನಕ್ಕೆ ನೀಡಿದ್ದೇವೆ. ಇನ್ನೂಳಿದ ಅನುದಾನವನ್ನು ಮುಖ್ಯಮಂತ್ರಿಗಳು ನೀಡುವಂತೆ ಮನವಿ ಮಾಡಿದರು. 20 ಕೋಟಿಯನ್ನು ಸಾಮಾನ್ಯ ಬೀದಿಯ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ನೀಡಿದೇವೆ. ಸಿಎಂ ಸಿದ್ದರಾಮಯ್ಯ ರವರು ಮತ್ತಷ್ಟು ಅನುದಾನ ನೀಡಿದ್ರೆ ಅಭಿವೃದ್ಧಿ ಪಡಿಸಬಹುದು.
90 ಕೋಟಿ ವೆಚ್ಚದ ದೇವನೂರು ಏತ ನೀರಾವರಿ ಯೋಜನೆ, ಹುರಾ ಏತ ನೀರಾವರಿ ಯೋಜನೆ ನೀಡಿದ್ದಾರೆ. ಬದನವಾಳು ಖಾದಿ ಗ್ರಾಮೋದ್ಯೋಗ ಕೇಂದ್ರವನ್ನು ಅಭಿವೃದ್ಧಿ ಪಡಿಸಲು ಮುಂದಾಗಿ ಸಹಕಾರ ನೀಡಿದ್ದಾರೆ. ದೇವಾಲಯದ ಮುಂಭಾಗದಲ್ಲಿ ಹರಿಯುವ ಕಪಿಲಾ ನದಿ ಪ್ರವಾಹದ ಹಿನ್ನೆಲೆಯಲ್ಲಿ. ಅಭಿವೃದ್ಧಿ ಪಡಿಸಲು 70 ಕೋಟಿ ಡಿಪಿಆರ್ ಆಗಿದೆ ಅದನ್ನು ಅಪ್ರೋಲ್ ಮಾಡಿಕೊಡಿ.
ನೀರು ಬಂದಾಗ ಮುಳುಗಡೆ ಆಗುತ್ತದೆ ಎಂದು ಸಿಎಂ ಮನವಿ ಮಾಡಿದರು. ಉಪ್ಪಾರ ಭವನಕ್ಕೆ ಹೆಚ್ಚಿನ ಅನುದಾನವನ್ನು ನೀಡಬೇಕು. ಇನ್ನೂಳಿದ ಭವನಗಳಿಗೂ ಅನುದಾನ ನೀಡಿದರೆ ಅನುಕೂಲವಾಗುತ್ತದೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ಹೇಳಿದರು.

