ಮೈಸೂರು : ಮತಗಳ್ಳತನದ ವಿರುದ್ಧ ಕಾಂಗ್ರೆಸ್ ಹೋರಾಟ ವಿಚಾರವಾಗಿ ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದರು.
ರಾಹುಲ್ ಗಾಂಧಿ ಹೇಳಿರುವ ಕೆಲವು ವಿಚಾರಗಳು ಸತ್ಯ ಇದೆ. ಈ ಬಗ್ಗೆ ಮುಂದಿನ ಕಾನೂನು ಹೋರಾಟಕ್ಕೆ ಲೀಗಲ್ ಟೀಂ ಜೊತೆ ಚರ್ಚೆ ಮಾಡುತ್ತಿದ್ದೇನೆ. ನಾವು ಈ ಬಗ್ಗೆ ರಿಸರ್ಚ್ ಮಾಡುತ್ತಿದ್ದೇವು. ಮತಗಳ್ಳತನ ಆಗಿರುವುದು ಗೊತ್ತಾಗಿದೆ ಹೀಗಾಗಿ ಹೋರಾಟ ಆರಂಭಿಸಿದ್ದೇವೆ ಎಂದರು.
ಇದೆಲ್ಲಾ ಸುಳ್ಳು ಎಂಬ ಬಿಜೆಪಿ ಆರೋಪ ವಿಚಾರ. ಒಂದೇ ಕೊಠಡಿಯಲ್ಲಿ 80 ಜನ ಹೇಗಿದ್ರು ಎಂಬುದನ್ನ ಹೇಳಲಿ. ಅವರು ಹೋಟೆಲ್ ಉದ್ಯೋಗಿಗಳೇ ಆಗಿದ್ರು ಒಂದೇ ರೂಂ ನಲ್ಲಿ ಇರಲು ಸಾಧ್ಯನಾ? ನಮ್ಮ ಸರ್ವೇ ಪ್ರಕಾರ ಲೋಕಸಭಾ ಚುನಾವಣೆಯಲ್ಲಿ 16 ಸೀಟ್ ಗೆಲ್ಲುವ ಅವಕಾಶ ಇತ್ತು, ಅದು ಆಗಿಲ್ಲ ಎಂದರು.

