ಮೈಸೂರು : ತಾಲೂಕಿನ ವರುಣಾ ವಿಧಾನಸಭಾ ಕ್ಷೇತ್ರದ ಬಿಳಿಗೆರೆ ಗ್ರಾಮದಲ್ಲಿ ಚಾಮರಾಜನಗರ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರದ ಬೃಹತ್ ಸಮಾವೇಶ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಜ್ಯೋತಿ ಬೆಳಗುವ ಮೂಲಕ ಉದ್ಘಾಟನೆ ಮಾಡಿದರು.
ಬಳಿಕ ಮಾತನಾಡಿದ ಅವರು, ವರುಣ ಕ್ಷೇತ್ರ ನನ್ನ ಪಾಲಿಗೆ ಅದೃಷ್ಟ ಕ್ಷೇತ್ರ. ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿಯವರು ನನ್ನನ್ನ ಸೋಲಿಸಲಿಕ್ಕೆ ಸೋಮಣ್ಣನನ್ನ ಕರೆ ತಂದರು. ಈಗ ತುಮಕೂರಿಗೆ ಪಾರ್ಲಿಮೆಂಟ್ ಹೋಗಿದ್ದಾರೆ. ಸೋಮಣ್ಣ ಸಾಕಷ್ಟು ಹಣವನ್ನ ಖರ್ಚು ಮಾಡಿದ್ರು. ಆದರೆ, ನೀವು ಸೋಮಣ್ಣನನ್ನ ಸೋಲಿಸಿ ನನ್ನನ್ನ ಗೆಲ್ಲಿಸಿದ್ರಿ. ನಾನು ಮುಖ್ಯಮಂತ್ರಿಯಾದ ಬಳಿಕ ಬಡವರು, ಅಲ್ಪ ಸಂಖ್ಯಾತರ ಪರ ಕೆಲಸ ಮಾಡಿದ್ದೇನೆ.
ನಮ್ಮ ಸರ್ಕಾರ ನಾವು ನುಡಿದಂತೆ ನಡೆದಿದ್ದೇವೆ.ವರುಣ ಕ್ಷೇತ್ರದಲ್ಲಿ 60 ಸಾವಿರ ಲೀಡ್ ಕೊಡಿ ಆಗ ನನ್ನ ಯಾರು ಮುಟ್ಟಲು ಆಗಲ್ಲ. ನಾನು ಇರಬೇಕಾ ಬೇಡ್ವಾ. ನಾನು ಇರಬೇಕು ಅಂದರೆ ವರುಣ ಕ್ಷೇತ್ರದಲ್ಲಿ 60 ಸಾವಿರ ಲೀಡ್ ಕೊಡಬೇಕು ಎಂದು ಹೇಳಿದರು.