ಮೈಸೂರು : ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ಬಡ ಮಕ್ಕಳ ಅನ್ನಕ್ಕೆ ಕನ್ನ ಹಾಕಿದ್ದು, ಹಾಸ್ಟೆಲ್ ಗುಣಮಟ್ಟದ ಆಹಾರ ಇಲ್ಲದಂತಾಗಿದೆ.

ನಾನು ಬಡವರ ಪರ ಎನ್ನುವ ಸಿದ್ದರಾಮಯ್ಯ ಜಿಲ್ಲೆಯಲ್ಲಿ ಬಡ ಮಕ್ಕಳ ಹೊಟ್ಟೆಗೆ ಬರೆ ಹಾಕಲಾಗಿದೆ. ಜಂಟಿ ನಿರ್ದೇಶಕರ ದುರಾಡಳಿತಕ್ಕೆ ಬಡ ಮಕ್ಕಳು ಕಂಗಾಲಾಗಿದ್ದಾರೆ. ಸರ್ಕಾರದಿಂದ ಹಣ ಬಂದ್ರು  ಆಹಾರ ಸಿಗುತ್ತಿಲ್ಲ.

ಜಂಟಿ ನಿರ್ದೇಶಕ ನಿಯೋಜಿಸಿದವರದ್ದೇ ಅಧಿಕಾರ. ಅಡುಗೆ ಕೆಲಸದವರನ್ನೇ ವಾರ್ಡ್ನ್‌ಗಳಾಗಿ ಜಂಟಿ ನಿರ್ದೇಶಕ ರಂಗೇಗೌಡ ರನ್ನು ನಿಯೋಜನೆ ಮಾಡಿದ್ದಾರೆ. ಜಂಟಿ ನಿರ್ದೇಶಕರ ಕಚೇರಿಯಿಂದಲೇ ದಾಖಲೆ ಲಭ್ಯವಾಗಿದೆ.

ವಾರ್ಡನ್‌ಗಳಿರುವ ಹಾಸ್ಟೆಲ್ಗಳಲ್ಲಿ ಗುಣಮಟ್ಟದ ಆಹಾರ ಸಿಗುತ್ತಿದೆ. ಅಡುಗೆ ಕೆಲಸದವರು ವಾರ್ಡನ್‌ಗಳಾಗಿ ನಿಯೋಜನೆಗೊಂಡಿರುವ ಹಾಸ್ಟೆಲ್‌ಗಳಲ್ಲಿ ತಿಳಿಸಾರು ಅನ್ನ ನೀಡಲಾಗುತ್ತಿದೆ. ವಿದ್ಯಾರ್ಹತೆ ಇಲ್ಲದೆ ಮಾನದಂಡವಿಲ್ಲದವರನ್ನೆ ನಿಯೋಜನೆ ಮಾಡಿ ಜಂಟಿ ನಿರ್ದೇಶಕ ದರ್ಪ ತೋರಿದ್ದಾರೆ.

ಹುಣಸೂರು, ಪಿರಿಯಾಪಟ್ಟಣ, ಹೆಚ್.ಡಿ ಕೋಟೆ ತಾಲ್ಲೂಕಿನಲ್ಲಿ ಜಂಟಿ ನಿರ್ದೇಶಕರು ನೇಮಿಸಿದ ಅಡುಗೆ ಕೆಲಸದವರೇ ವಾರ್ಡನ್‌ಗಳು. ಸಂವಿಧಾನದ ಪಾಠ ಮಾಡುವ ಜಿಲ್ಲಾ ಉಸ್ತುವಾರಿ ಸಚಿವರಿಗಿಲ್ಲ ಬಡ ಮಕ್ಕಳ ಕಾಳಜಿ. ಬಡ ಮಕ್ಕಳ ಆರೋಗ್ಯದ ಜೊತೆ ಜಂಟಿ ನಿರ್ದೇಶಕ  ಆಟವಾಡುತ್ತಿದ್ದಾರೆ. ಮಕ್ಕಳಿಗೆ ಕೊಡಬೇಕಾದ ಗುಣಮಟ್ಟದ ಆಹಾರದಲ್ಲೂ ಗೋಲ್ಮಾಲ್ ನಡೆಯುತ್ತಿದೆ.

ಮಕ್ಕಳ ಅನ್ನದಲ್ಲೂ ಲೂಟಿ ಮಾಡುತ್ತಿರುವ ಜಡಿ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಮೊಟ್ಟೆ, ಬಾಳಹಣ್ಣು ಚಾಪಾತಿ ಮುದ್ದೆ ಪಲ್ಯಕ್ಕೆ ಕೊಕ್ಕೆ. ಅನ್ನ ಸಾಂಬರ್‌ ಕೊಟ್ಟು ಗುಣಮಟ್ಟದ ಆಹಾರ ಕೊಡುತ್ತಿದ್ದೇವೆ ಎಂದು ಜಂಟಿ ನಿರ್ದೇಶಕ ರಿಪೋರ್ಟ್ ಮಾಡಿದ್ದಾರೆ.

ಅಡುಗೆ ಕೆಲಸದವರು ವಾರ್ಡನ್‌ಗಳಾಗಿ ನಿಯೋಜನೆಗೊಂಡಿರುವ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಅತಂತ್ರ ಉಂಟಾಗಿದೆ. ಸರ್ಕಾರದ ಮೂಲಕ ನಿಯಮಾನುಸಾರ ನೇಮಕವಾಗಿರುವ ವಾರ್ಡನ್‌ಗಳಿರುವ ಹಾಸ್ಪೆಲ್‌ನಲ್ಲಿ ಮೇನು ಪ್ರಕಾರ ಊಟತಿಂಡಿ ಸಿಗುತ್ತಿದೆ.  ಕಾನೂನು ಬಾಹಿರವಾಗಿ ಅಡುಗೆ ಕೆಲಸದವರನ್ನೆ ವಾರ್ಡನ್‌ಗಳಾಗಿ ನಿಯೋಜನೆ ಮಾಡಿರುವ ಹಾಸ್ಟೆಲ್‌ಗಳಲ್ಲಿ ಮಕ್ಕಳಿಗೆ ಬರೀ ಅನ್ನ ಸಾಂಬರ್ ಸಿಗುತ್ತಿದೆ.

ಸರ್ಕಾರದ ಆದೇಶ ಗಾಳಿಗೆ ತೂರಿ ಅಡುಗೆ ಕೆಲಸದವರನ್ನ ವಾರ್ಡನ್‌ಗಳಾಗಿ ರಂಗೇಗೌಡ ನಿಯೋಜಿಸಿದರು. ಕೇವಲ ನಾಲ್ಕೈದು ವರ್ಷಗಳ ಹಿಂದೆ ಬಂದ ಅಡುಗೆ ಕೆಲಸದವರಿಗೆ ವಾರ್ಡನ್ ಕಿರೀಟ ನೀಡಲಾಗಿದೆ. ವಾಮಮಾರ್ಗದಲ್ಲಿ ವಾರ್ಡನ್‌ಗಳಾಗಿರುವ ಅಡುಗೆ ಕೆಲಸದವರಿಂದ ಇಪ್ಪತ್ತು ವರ್ಷಗಳಿಂದ ಅಡುಗೆ ಕೆಲಸ ಮಾಡುತ್ತಿರುವವರಿಗೆ ನಿತ್ಯ ನರಕ ಅನುಭವಿಸುವಂತಾಗಿದೆ.  ಮೈಸೂರಿನಲ್ಲಿ ಮಾತ್ರವಲ್ಲ ರಾಜ್ಯಾದ್ಯಂತ ಹಾಸ್ಟೆಲ್‌ಗಳಲ್ಲೂ ಇದೇ ಗೋಲ್ಮಾಲ್ ನಡೆಯುತ್ತಿದೆ. ಅಡುಗೆಯವರನ್ನ ಮೂಲ ಸ್ಥಾನಕ್ಕೆ ಕಳುಹಿಸಿ ಎಂದು ಮೂಲ ವಾರ್ಡ‌ನ್‌ಗಳನ್ನ ನಿಯೋಜಿಸಿ ಎಂದು ಒತ್ತಾಯಿಸಲಾಗಿದೆ.