ಮೈಸೂರು: ಮೈಸೂರಿನ ನಾಗರೀಕರಿಗೆ ರಸ್ತೆ ಗುಂಡಿಯ ಹಾವಳಿಯಿಂದ ಕಾಪಾಡಬೇಕು ಹಾಗೂ ಫುಟ್ ಬಾತ್ ಸಾರ್ವಜನಿಕರಿಗೆ ಮುಕ್ತಗೊಳಿಸಲು ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಇಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದರು. ತಹಶೀಲ್ದಾರ್ ರೇಖಾರವರಿಗರ ಮನವಿ ಪತ್ರ ನೀಡಿದರು. ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ವಿನಯ್ ಕುಮಾರ್ ನೇತೃತ್ವದಲ್ಲಿ ಮನವಿ ಪತ್ರ ನೀಡಲಾಯಿತು.

ನಾಡಹಬ್ಬ ದಸರಾ ಉತ್ಸವಕ್ಕೆ ದಿನಗಣನೆ ಆರಂಭವಾದರೂ ನಗರದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಇನ್ನೂ ಚಾಲನೆ ದೊರೆತಿಲ್ಲ.ನಗರದ ಬಹುತೇಕ ರಸ್ತೆಗಳು ಹೊಂಡಗಳಿಂದ ತುಂಬಿದೆ. ಸಂಚಾರ ದುಸ್ತರವಾಗಿದೆ, ಮೈಸೂರಿಗೆ ದಸರಾ ಮಾತ್ರವಲ್ಲದೆ ಎಲ್ಲಾ ಸಮಯದಲ್ಲೂ ಪ್ರವಾಸಿಗರು ಭೇಟಿ ನೀಡುತ್ತಾರೆ. ದಸರಾ ಸಂದರ್ಭ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ.ಆದರೆ ರಸ್ತೆಗಳು ನಗರದ ಸೌಂದರ್ಯಕ್ಕೆ ಕಪ್ಪುಚುಕ್ಕೆಯಾಗಿದೆ. ರಸ್ತೆಗಳಲ್ಲಿ ವಾಹನ ಚಾಲನೆ ಮಾಡಲು ಹರಸಹಾಸ ಪಡುವ ಪರಿಸ್ಥಿತಿ ನಿರ್ಮಾಣಗೊಂಡಿದೆ.

ವಿಶೇಷವಾಗಿ ಮಳೆ ಬಂದಾಗ ರಸ್ತೆ ಸಂಚಾರ ಮತ್ತಷ್ಟು ದುಸ್ತರವಾಗುತ್ತದೆ. ರಸ್ತೆಯ ಗುಂಡಿಗಳಲ್ಲಿ ನೀರು ತುಂಬಿಕೊಂಡು ಅದನ್ನು ಗುರುತಿಸಲು ಸಾಧ್ಯವಾಗದೆ ಅಪಘಾತಗಳು ಸಂಭವಿಸುತ್ತಿದೆ. ತಾತ್ಕಾಲಿಕ ಕಾಮಗಾರಿ ಮಾಡಿದರೂ ಒಂದೇ ಮಳೆಗೆ ಮತ್ತೆ ಗುಂಡಿಗಳು ಕಾಣಿಸಿಕೊಂಡಿವೆ.ದಸರಾ ಸಂಧರ್ಭದಲ್ಲಿ ಕೈಗೊಳ್ಳುವ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ ಎಂಬುದು ಒತ್ತಾಯಿಸಿದ್ದಾರೆ.

ಮೈಸೂರು ನಗರದಲ್ಲಿ ಪಾದಾಚಾರಿ ಮಾರ್ಗ ಒತ್ತುವರೆಯಿಂದಾಗಿ ಸಾರ್ವಜನಿಕರ ಓಡಾಟಕ್ಕೆ ಕಷ್ಟವಾಗುತ್ತಿದ್ದು, ನಗರದಲ್ಲಿ ಹಲವಡೆ ಫುಟ್ಪಾತ್ ಹುಡುಕಿದರೂ ಸಿಗದು. ಕೂಡಲೇ ಈ ಬಗ್ಗೆ ಆಡಳಿತ ವರ್ಗ ಗಮನ ಹರಿಸಬೇಕು, ಬಹುತೇಕ ಪಾದಾಚಾರಿ ಮಾರ್ಗಗಳನ್ನ ಸಾರ್ವಜನಿಕರ ಓಡಾಟಕ್ಕೆ‌ಮುಕ್ತಗೊಳಿಸುವಂತೆ ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಮೂಡ ಮಾಜಿ ಸದಸ್ಯರಾದ ಲಕ್ಷ್ಮೀದೇವಿ, ಕೆ ಆರ್ ಬ್ಯಾಂಕ್ ನಿರ್ದೇಶಕರಾದ ಜಿ ಎಂ ಪಂಚಾಕ್ಷರಿ, ಮುಖಂಡರಾದ ಆನಂದ್, ಎಸ್ ಎನ್ ರಾಜೇಶ್, ಬಸವರಾಜ್ ಮಸಲಿ, ಗೋಪಿ, ಮಂಜುನಾಥ್, ರಾಕೇಶ್ ಹಾಗೂ ಇನ್ನಿತರ ಪದಾಧಿಕಾರಿಗಳು ಹಾಜರಿದ್ದರು.