ಮೈಸೂರು : ಪೌರಕಾರ್ಮಿಕರು, ಮಾವುತರ ಮಕ್ಕಳು ಹಿಮಾಲಯಕ್ಕೆ ಚಾರಣ ಮಾಡಿ ಮೌಂಟ್ ಕುವಾರಿ ಪಾಸ್ ಏರುವುದರ ಮೂಲಕ ಐತಿಹಾಸಿಕ ಸಾಧನೆ ಮಾಡಿದರು. ಮೈಸೂರಿನ ಎಂಟು ಪೌರಕಾರ್ಮಿಕರ ಮಕ್ಕಳು, ಮಾವುತರು, ಅರಣ್ಯ ರಕ್ಷಕರು ಮತ್ತು ಇತರ ನಾಗರಿಕರ ತಂಡದಿಂದ ಸಾಧನೆ ಮಾಡಲಾಯಿತು. ಉತ್ತರಾಖಂಡದ 13,990 ಅಡಿ ಎತ್ತರದ ಮೌಂಟ್ ಕುವಾರಿ ಪಾಸ್ ಮಕ್ಕಳು ಹತ್ತಿದ್ದಾರೆ.

ನಗರದ ಟೈಗರ್ ಅಡ್ವೆಂಚರ್ ಫೌಂಡೇಶನ್, ದಿ ಮೌಂಟೇನ್ ಗೋಟ್ ಸಹಯೋಗದೊಂದಿಗೆ ಸಹಾಸ ಯಾತ್ರೆ ಕೈಗೊಂಡಿದ್ದು, ಜೂನ್-2025 ಎಂಬ ಹೆಸರಿನಲ್ಲಿ ಯಾತ್ರೆ ಮಾಡಲಾಯಿತು. ಮರಿಮಲ್ಲಪ್ಪ ಪಿಯು ಕಾಲೇಜಿನ ಉಪನ್ಯಾಸಕ ಅನಿಲ್ ಕುಮಾರ್ ನೇತೃತ್ವದಲ್ಲಿ 24 ಜನರ ತಂಡದಲ್ಲಿ ಪೌರಕಾರ್ಮಿಕರ ಮಕ್ಕಳು, ಹುಣಸೂರು ಅರಣ್ಯ ವಿಭಾಗದ ಮಾವುತರು, ಅರಣ್ಯ ಬೀಟ್ ಗಾರ್ಡ್ಗಳು, ಗೃಹಿಣಿಯರು ಮತ್ತು ಶಾಶ್ವತ ಸೇವಾ ಸಮಾಜ ಶಾಲೆಯ ವಿದ್ಯಾರ್ಥಿಗಳಿಂದ ಪರ್ವತಾರೋಹಣ ಮಾಡಲಾಯಿತು.
ಮೇ 1 ರಂದು ಭಾರತೀಯ ತ್ರಿವರ್ಣ ಧ್ವಜವನ್ನು ಕುವಾರಿಯ ಮೇಲೆ ಯಾತ್ರಿಕರು ಹಾರಿಸಿದರು. ಭಾರತದ ಸಾಹಸ ಇತಿಹಾಸದಲ್ಲಿ ಪೌರಕಾರ್ಮಿಕರ ಮಕ್ಕಳು, ಅರಣ್ಯ ಕಾವಲುಗಾರರು ಮತ್ತು ಮಾವುತರು ಮಾಡಿದ ಮೊದಲ ಪರ್ವತಾರೋಹಣವಾಗಿದೆ.

