ಮೈಸೂರು: ಶಿಥಿಲಾವಸ್ಥೆಯಲ್ಲಿರುವ ಅಂಗನವಾಡಿಗಳಲ್ಲಿ ಮಕ್ಕಳಿಗೆ ಪಾಠ ನಡೆಯುತ್ತಿದ್ದು, ಜೀವ ಭಯದಲ್ಲಿ ಅಂಗನವಾಡಿ ಪುಟಾಣಿಗಳು ಇರುವ ಪರಿಸ್ಥಿತಿ ನಂಜನಗೂಡು ತಾಲ್ಲೂಕಿನ ನಗರ್ಲೆ ಗ್ರಾಮದಲ್ಲಿ ನಡೆದಿದೆ.

ಬಿರುಕು ಬಿಟ್ಟ ಗೋಡೆ, ಸೋರುವ ಕೊಠಡಿಗಳಲ್ಲೆ ಮಕ್ಕಳಿಗೆ ಆಟ ಪಾಠ ನಡೆಯುತ್ತಿದ್ದು, ಸಿಎಂ ಸ್ವ ಕ್ಷೇತ್ರದ ನಗರ್ಲೆ ಗ್ರಾಮದ ಅಂಗನವಾಡಿಗಳ ದುಸ್ಥಿತಿ ಇದಾಗಿದೆ. ಗ್ರಾಮದಲ್ಲಿ ಒಟ್ಟು 6 ಅಂಗನವಾಡಿ ಕೇಂದ್ರಗಳಿದ್ದು.3 ನೇ ಅಂಗನವಾಡಿ‌ ಕೇಂದ್ರ  ಶಿಥಿಲಾವಸ್ಥೆ ತಲುಪಿದೆ.

4ನೇ ಅಂಗನವಾಡಿ ಕೇಂದ್ರ ಸರ್ಕಾರಿ ಶಾಲೆಗೆ ಸ್ಥಳಾಂತರವಾಗಿದೆ. ಅನುದಾನ‌ಕೊರತೆ ಯಿಂದ ಅರ್ಧಕ್ಕೆ ನಿಂತಿರುವ 6ನೇ ಅಂಗನವಾಡಿ ಕೇಂದ್ರ ಕಾಮಾಗಾರಿ ನಡೆಯುತ್ತಿದೆ. ಶಿಥಿಲಾವಸ್ಥೆಯಲ್ಲಿರುವ ಅಂಗನವಾಡಿ ಕೇಂದ್ರದ ಮೇಲ್ಚಾವಣೆ ಉದುರುತ್ತಿದ್ದು ಕುಸಿದು ಬೀಲುವ ಸ್ಥಿತಿಯಲ್ಲಿದೆ.

ಅಲ್ಲದೆ ಅಂಗನವಾಡಿಗೆ ಮೂಲ‌ಭೂತ ಸೌಕರ್ಯವಂತೂ ಮರೀಚಿಕೆಯಾಗಿದೆ. ಅಂಗನವಾಡಿ ಸುತ್ತಮುತ್ತ ಗಿಡ ಗಂಟಿಗಳು ಅಳೆತ್ತರಕ್ಕೆ ಬೆಳಿದು ನಿಂತಿದೆ. ಮಕ್ಕಳಿಗೆ ತೊಂದರೆ ಯಾದರೆ ಯಾರು ಜವಾಬ್ದಾರಿ ಎಂದು ಸ್ಥಳೀಯರ ಪ್ರಶ್ನೆಯಾಗಿದೆ.

ಅಲ್ಲದೆ ಸಂಜೆಯಾದರೆ ಅಂಗನವಾಡಿ ಕೇಂದ್ರ ಕುಡುಕರ ಅಡ್ಡೆ ಆಗಿದೆ. ಇನ್ನಾದರು ಎಚ್ಚೆತ್ತು ಈ ಸಮಸ್ಯೆಗಳಿಗೆ ಮುಕ್ತಿ ನೀಡಿ.ಹೋರಾಟಗಾರ ಹಾಗೂ ಸ್ಥಳೀಯ ನಗರ್ಲೆ ವಿಜಯ್ ಕುಮಾರ್ ಮನವಿ ಮಾಡಿಕೊಂಡಿದ್ದಾರೆ.