ಮೈಸೂರು : ಕುರ್ ಕುರೆ ಪ್ಯಾಕೆಟ್‌ನಲ್ಲಿದ್ದ ಬಾಲ್ ನುಂಗಿ ಮಗು ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಗೌರಿಪುರದಲ್ಲಿ ನಡೆದಿದೆ.

ಗ್ರಾಮದ ಸಂತೋಷ್-ಐಶ್ವರ್ಯ ದಂಪತಿಯ ಮೂರು ವರ್ಷದ ಏಕೈಕ ಪುತ್ರ. ಮುಕುಂದ್ ಮಯೂರ್ ಸಾವನ್ನಪ್ಪಿದ ಮಗು. ಶನಿವಾರ ಮಗು ಅಳುತ್ತಿದ್ದುದ್ದನ್ನು ಕಂಡು ಸಂಬಂಧಿಕರ ಮಕ್ಕಳು ಗೌರಿಪುರದ ಅಂಗಡಿಯಲ್ಲಿ ಕುರ್ ಕುರೆ ಪ್ಯಾಕೆಟ್ ಕೊಡಿಸಿದ್ದಾರೆ.

ಕುರ್ ಕುರೆ ಪ್ಯಾಕೆಟ್‌ನಲ್ಲಿ ಮಕ್ಕಳ ಆಕರ್ಷಣೆಗಾಗಿ ಪ್ಲಾಸ್ಟಿಕ್ ಬಾಲ್ ಇರುತ್ತದೆ. ಮಗು ಕುರ್ ಕುರೆಯೊಂದಿಗೆ ಪ್ಲಾಸ್ಟಿಕ್ ಬಾಲ್ ನುಂಗಿದೆ. ಪ್ಲಾಸ್ಟಿಕ್ ಬಾಲ್ ಗಂಟಲಿಗೆ ಸಿಲುಕಿ ಮಗು ಒದ್ದಾಡಿದೆ. ಮಗು ಒದ್ದಾಡುವುದನ್ನ ಗಮನಿಸಿದ ಪೋಷಕರು ತಕ್ಷಣ ಹುಣಸೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಮಾರ್ಗ ಮಧ್ಯ ಮಗು ಉಸಿರುಗಟ್ಟಿ ಸಾವನ್ನಪ್ಪಿದೆ.