ಮೈಸೂರು: ಸಾಂಸ್ಕೃತಿಕ ನಗರ ಮೈಸೂರಿನ ಕೂಗಳತೆ ದೂರದಲ್ಲಿರುವ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆ ಆರ್ ಎಸ್ ಡ್ಯಾಂ ನಲ್ಲಿ ಅವ್ಯವಸ್ಥೆ ತಾಂಡವಡುತ್ತಿದ್ದು, ಪ್ರವಾಸಿಗರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆ ಆರ್ ಎಸ್ ಡ್ಯಾಮ್ ಪ್ರವಾಸಿಗರ ತಾಣವಾಗಿದ್ದು, ಮೆಟ್ಟಿಲುಗಳು ಕಿತ್ತು ಬೀಳುತ್ತಿವೆ. ಆಕರ್ಷಣೆಯಾಗಿರುವ ನೀರಿನ ಕಾರಂಜಿ ಕೆಟ್ಟು ನಿಂತಿವೆ. ವಿದ್ಯುತ್ ವ್ಯವಸ್ಥೆ ಇಲ್ಲ. ಪ್ಲಾಸ್ಟಿಕ್ ಯಥೇಚ್ಛವಾಗಿ ಎಲ್ಲೆಂದರಲ್ಲಿ ಕಾಣುತ್ತಿದ್ದು ಅಭಿವೃದ್ಧಿ ಮಾತ್ರ ಮರಿಚಿಕೆಯಾಗಿದೆ.

ಶಾಲಾ- ಕಾಲೇಜುಗಳ ಮಕ್ಕಳು ಪ್ರವಾಸಕ್ಕೆ ಬರುತ್ತಿದ್ದಾರೆ ಅಲ್ಲದೆ ದೇಶವಿದೇಶಗಳಿಂದಲೂ ಪ್ರವಾಸಿಗರು ದಿನನಿತ್ಯ ಆಗಮಿಸುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯರವರು ಮತ್ತು ಸ್ಥಳೀಯ ಶಾಸಕರು ಮತ್ತು ಸಚಿವರು ಬಾಗಿನ ಅರ್ಪಿಸಲು ಮಾತ್ರ ಬರುತ್ತಾರೆ. ಹೊರತು, ಅಭಿವೃದ್ಧಿ ಮಾತ್ರ ಮಾಡಲು ಬರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಿಂದ ಜನರು ಆಗಮಿಸುತ್ತಿದ್ದು ಇಲ್ಲಿನ ಆಡಳಿತ ವ್ಯವಸ್ಥೆ ಈ ಅವ್ಯವಸ್ಥೆಯನ್ನು ಸರಿಪಡಿಸುವಲ್ಲಿ ವಿಫಲರಾಗಿದ್ದಾರೆ. ಪ್ರವಾಸಿಗರ ಎಂಟ್ರಿಗೆ ನೂರು ರೂಪಾಯಿ ಟಿಕೆಟ್ ಕೊಟ್ಟರು ಯಾವುದೇ ಪ್ರಯೋಜನವಾಗಿಲ್ಲ. ನೂರು ರೂಪಾಯಿ ಕೊಟ್ಟು ಪ್ರವೇಶ ಪಡೆದರು ಯಾವುದೇ ಸೌಲಭ್ಯವಿಲ್ಲ ಎಂದು ಪ್ರವಾಸಿಗರು ಕಿಡಿ ಕಾರಿದ್ದಾರೆ. ಕೂಡಲೇ ಈ ವ್ಯವಸ್ಥೆಯನ್ನು ಸರಿಪಡಿಸಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

