ಮೈಸೂರು: ಇಂದು ನಾಡದೇವಿ ಚಾಮುಂಡೇಶ್ವರಿ ವರ್ಧಂತಿ. ಚಾಮುಂಡಿ ಬೆಟ್ಟದಲ್ಲಿ ವರ್ಧಂತಿ ಮಹೋತ್ಸವದ ಸಂಭ್ರಮ ಮನೆ ಮಾಡಿದೆ. ಜಗನ್ಮಾತೆಗೆ ವಿಶೇಷ ಪೂಜೆ ನಂತರ ಉತ್ಸವಮೂರ್ತಿಯನ್ನ ಚಿನ್ನ ಪಲ್ಲಕ್ಕಿಯಲ್ಲಿ ಇರಿಸಿ ಅದ್ದೂರಿಯಿಂದ ಮೆರವಣಿಗೆ ನೆರವೇರಿತು. ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರು ದಂಪತಿ ಸಮೇತ ಆಗಮಿಸಿ ಉತ್ಸವಕ್ಕೆ ಚಾಲನೆ ನೀಡಿದರು.
ಪ್ರತಿ ವರ್ಷ ವರ್ಧಂತಿ ಮಹೋತ್ಸವದಂದು ದೇವರ ದರ್ಶನ ಪಡೆದು ಬೆಟ್ಟದಲ್ಲಿ ಚಿನ್ನದ ರಥಕ್ಕೆ ಚಾಲನೆ ಕೊಡುವ ಸಂಪ್ರದಾಯವಿದೆ.ಚಿನ್ನದ ಪಲ್ಲಕ್ಕಿಯಲ್ಲಿ ವಿರಾಜಮಾನಳಾದ ನಾಡದೇವಿಯ ಉತ್ಸವ ದೇವಸ್ಥಾನ ಸುತ್ತ ಒಂದು ಪ್ರದಕ್ಷಿಣೆ ಹಾಕುವ ಮೂಲಕ ವರ್ಧಂತಿ ಆಚರಿಸಲಾಗುತ್ತದೆ.
ಸಹಸ್ರಾರು ಭಕ್ತರು ನಾಡದೇವಿಯ ದರುಶನ ಪಡೆದರು.ಉತ್ಸವದಲ್ಲಿ ಭಾಗಿಯಾಗಿ ಪುನೀತರಾದರು. ಪಲ್ಲಕ್ಕಿ ಉತ್ಸವಕ್ಕೆ ಕರ್ನಾಟಕ ಪೊಲೀಸರು ಪೊಲೀಸ್ ಬ್ಯಾಂಡ್ ನುಡಿಸಿ ಗೌರ ಸಲ್ಲಿಸಿದರು.

