ಮೈಸೂರು: ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರದ ವಿರುದ್ಧ ಹಳೇ ಡಿಸಿ ಕಛೇರಿ ಬಳಿ ಕರ್ನಾಟಕ ಸೇನಾ ಪಡೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಭಕ್ತಿಯ ಹೆಸರಲ್ಲಿ ರಾಜ್ಯ ಸರ್ಕಾರ ಲೂಟಿ ಮಾಡಲು ಹೊರಟಿದೆ. ಆಷಾಡ ಮಾಸದಲ್ಲಿ ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರು ನೇರ ದರ್ಶನಕ್ಕೆ 2 ಸಾವಿರ ಟಿಕೆಟ್ ನಿಗದಿ ಮಾಡಲಾಗಿದೆ. ವಿಶೇಷ ದರ್ಶನ ಎಂದು ಲೂಟಿ ಮಾಡಲು ಹೊರಟಿದೆ. 50 ರೂಪಾಯಿ 300 ರೂಪಾಯಿ ಟಿಕೆಟ್ ರದ್ದು ಮಾಡಿದೆ.

ಬಡವರು 2 ಸಾವಿರ ಕೊಟ್ಟು ಟಿಕೆಟ್ ಖರೀದಿ ಮಾಡಲು ಆಗಲ್ಲ. ಬೆಟ್ಟಕ್ಕೆ ಬರುವ ಭಕ್ತರಿಗೆ ಸೂಕ್ತ ಮೂಲಭೂತ ಸೌಕರ್ಯ ಒದಗಿಸಲು ಇವರಿಗೆ ಸಾಧ್ಯವಾಗಿಲ್ಲ. ತಿರುಪತಿ, ಧರ್ಮಸ್ಥಳ, ಎಲ್ಲೂ ಕೂಡ ಈ ರೀತಿಯ ಟಿಕೆಟ್ ಇಲ್ಲ. ಈ ಕೂಡಲೇ ರಾಜ್ಯ ಸರ್ಕಾರ 2 ಸಾವಿರ ರೂಪಾಯಿ ಟಿಕೆಟ್ ರದ್ದು ಮಾಡಬೇಕು. ಸಿಎಂ ಈ ಬಗ್ಗೆ ಕ್ರಮ ವಹಿಸಬೇಕು ಎಂದು ಮೈಸೂರಿನಲ್ಲಿ ಕನ್ನಡ ಸೇನಾ ಪಡೆ ಸದಸ್ಯರು ಆಗ್ರಹಿಸಿದರು.