ಸರಗೂರು ವ್ಯಾಪ್ತಿಯಲ್ಲಿ ಕಾಡು ಹಂದಿಗಳ ಹಾವಳಿ: ರೈತರು ಕಂಗಾಲು

ಸರಗೂರು: ತಾಲೂಕಿನ ಬಿ.ಮಟಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಜಮೀನಿನಲ್ಲಿ ಬೆಳೆಯಲಾದ ಹೊಗೆಸೊಪ್ಪು ಬೆಳೆಗಳನ್ನು ಕಾಡು ಹಂದಿಗಳು ಮುರಿದು ತಿಂದು  ನಾಶಗೊಳಿಸುತ್ತಿದ್ದು, ಹೊಗೆಸೊಪ್ಪು ಬೆಳೆದ ರೈತರು ಕಂಗಲಾಗಿದ್ದಾರೆ.

ಬಿ.ಮಟಕೆರೆ, ಬಾಡಗ, ಗದ್ದೆಹುಂಡಿ, ಹೀರೆಹಳ್ಳಿ ಸೇರಿದಂತೆ ಅಕ್ಕ ಪಕ್ಕದ ಗ್ರಾಮಗಳಲ್ಲಿನ ರೈತರು ಸುಮಾರು 200 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಬೆಳೆಯಲಾದ ಹೊಗೆಸೊಪ್ಪಿನ ಗಿಡಗಳನ್ನು ಕಾಡು ಹಂದಿಗಳು 10 ದಿನಗಳಿಂದ ಸತತವಾಗಿ ಗಿಡವನ್ನು ಅರ್ಧಕ್ಕೆ ಕಡಿದು ತಿಂದು ನಾಶಗೊಳಿಸುತ್ತಿವೆ. ಇದರಿಂದಾಗಿ ಗಿಡಗಳ ಬೆಳವಣಿಗೆಗೆ ಕುಂಠಿತವಾಗುತ್ತಿದೆ. ಸಂಪೂರ್ಣವಾಗಿ ಬೆಳೆದರೆ 25 ಎಲೆಗಳು ಬರಲಿದ್ದು, ಹಂದಿ ತಿನ್ನುವುದರಿಂದ ಕೇವಲ 4 ಎಲೆಗಳು ಬೆಳೆಯಲಿವೆ. ಹೀಗಾಗಿ ರೈತರಿಗೆ ತುಂಬಾ ನಷ್ಟ ಉಂಟಾಗಿದೆ ಎಂದು ರೈತರು ದೂರಿದ್ದಾರೆ.

ರೈತರು ಸಾಲ ಮಾಡಿ ಹೊಗೆಸೊಪ್ಪು ನಾಟಿ ಮಾಡಲು ಎಕರೆಯೊಂದಕ್ಕೆ 40 ಸಾವಿರ ರೂ.ಖರ್ಚು ಮಾಡಿದ್ದು, ಬಿ.ಮಟಕೆರೆ ಗ್ರಾಮದ ರೈತ ಉದಯ್‌ಕುಮಾರ್ 22 ಸಾವಿರ ಗಿಡ ನಾಟಿ ಮಾಡಿದ್ದಾರೆ. ಪ್ರಕಾಶ್ ಮಾಸ್ತಯ್ಯ ಎಂಬ ರೈತ 12 ಸಾವಿರ, ಗದ್ದೆಹುಂಡಿ ಅನಂತರಾಜು 20 ಸಾವಿರ, ಸತೀಶ್ 20ಸಾವಿರ ಗಿಡ ನಾಟಿ ಮಾಡಿದ್ದಾರೆ. ಹೀಗಾಗಲೇ ಹಂದಿಗಳು ಹೊಗೆಸೊಪ್ಪಿನ ಗಿಡಗಳನ್ನು ಸಂಪೂರ್ಣವಾಗಿ ಕಡಿದು ನಾಶಗೊಳಿಸಿರುವುದರಿಂದ ಎಕರೆಯೊಂದಕ್ಕೆ 4 ಲಕ್ಷ ರೂ.ನಷ್ಟವಾಗಲಿದೆ ಎಂದು ರೈತರು ತಮ್ಮ ಅಳಲು ತೊಡಿಕೊಂಡಿದ್ದಾರೆ.

ಕಾಡು ಹಂದಿಗಳ ಹಾವಳಿಯನ್ನು ತಡೆಗಟ್ಟಲು ರಾತ್ರಿ ವೇಳೆ ಜಮೀನಿನಲ್ಲಿ ಕಾವಲು ಕಾಯುತ್ತೇವೆ. ಆದರೂ ಕಾಡುಹಂದಿ ಕಣ್ಣು ತಪ್ಪಿ ಬೆಳೆಗಳನ್ನು ನಾಶಗೊಳಿಸುತ್ತಿವೆ. ಅರಣ್ಯ  ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಈ ಕುರಿತು ಅರಣ್ಯ ಇಲಾಖೆ ಸೂಕ್ತ ಕ್ರಮ ವಹಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.

Ashika S

Recent Posts

ಚಿರಂಜೀವಿ, ನಟಿ ವೈಜಯಂತಿಮಾಲಾ ಸೇರಿ ಹಲವು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ

ತೆಲುಗು ನಟ ಕೊನಿಡೆಲಾ ಚಿರಂಜೀವಿ, ಹಿರಿಯ ನಟಿ ವೈಜಯಂತಿಮಾಲಾ ಬಾಲಿ,  ಸುಪ್ರೀಂ ಕೋರ್ಟ್‍ನ ಮೊದಲ ಮಹಿಳಾ ನ್ಯಾಯಾಧೀಶೆ ದಿ.ಎಂ ಫಾತಿಮಾ…

4 hours ago

ಏರ್ ಇಂಡಿಯಾ ಸಿಬ್ಬಂದಿಯ ಪ್ರತಿಭಟನೆ ಅಂತ್ಯ: ಕೆಲಸಕ್ಕೆ ಮರಳುವಂತೆ ಕಂಪನಿ ಆದೇಶ

ಏರ್ ಇಂಡಿಯಾ  ವಿಮಾನ ಸಂಸ್ಥೆಯ ಉದ್ಯೋಗಿಗಳು ಹೇಳದೆ ಕೇಳದೆ ರಜಾ ಹಾಕಿದ್ದರಿಂದ ಇಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ 85 ವಿಮಾನಗಳನ್ನು…

4 hours ago

ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಜಿಲ್ಲಾ ಪೋಲಿಸ್ ಅಧೀಕ್ಷಕರಿಂದ ಅಭಿನಂದನೆ

ರಾಜ್ಯ ಗೃಹ ಇಲಾಖೆಯ ಆಡಳಿತ ವ್ಯಾಪ್ತಿಯಲ್ಲಿನ ಧಾರವಾಡ ಶ್ರೀ ಎನ್.ಎ. ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆಯಲ್ಲಿ ಎಪ್ರಿಲ್-2024…

4 hours ago

ಬೀದರ್: ರಾಜಿ ಸಂಧಾನಕ್ಕೆ ಒಂದಾದ ಮೂವರು ದಂಪತಿ

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ನಗರದಲ್ಲಿ ಗುರುವಾರ ನಡೆಸಿದ ರಾಜಿ ಸಂಧಾನ ಯಶಸ್ವಿಯಾಗಿದ್ದು, ಮೂವರು ದಂಪತಿ ವಿರಸ ಮರೆತು ಒಂದಾಗಿದ್ದಾರೆ.

4 hours ago

ಭಾರತದಲ್ಲೂ ಕಪ್ಪು ಚರ್ಮದವರನ್ನು ಹೋಲುವ ಜನರಿದ್ದಾರೆ: ಅಧೀರ್ ರಂಜನ್ ಚೌಧರಿ

ಸ್ಯಾಮ್ ಪಿತ್ರೋಡಾ ಅವರ “ಜನಾಂಗೀಯ” ಹೇಳಿಕೆಯನ್ನು ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಸಮರ್ಥಿಸಿಕೊಂಡಿದ್ದಾರೆ.

6 hours ago

ಶಿವಮೊಗ್ಗ ಗ್ಯಾಂಗ್​ವಾರ್​: ಗಾಯಗೊಂಡಿದ್ದ ಮತ್ತೊಬ್ಬ ಸಾವು

ಲಷ್ಕರ್ ಮೊಹಲ್ಲಾದ ಮೀನು ಮಾರುಕಟ್ಟೆ ಬಳಿ ಮೇ.08 ರಂದು ನಡೆದ ಗ್ಯಾಂಗ್ ವಾರ್ ನಲ್ಲಿ ಇಬ್ಬರು ರೌಡಿಗಳಾದ ಗೌಸ್ ಮತ್ತು…

6 hours ago