ಹನೂರು: ಎರಡು ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾದ ಘಟನೆ ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ರಸ್ತೆಯ ಪೊನ್ನಾಚಿ ಕ್ರಾಸ್ ಎರಡನೇ ತಿರುವಿನಲ್ಲಿ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಮಲೆ ಮಹದೇಶ್ವರ ಬೆಟ್ಟದಲ್ಲಿ ಪೂಜೆ ಸಲ್ಲಿಸಿ ವಾಪಸ್ ಆಗುತ್ತಿದ್ದ ಮಂಡ್ಯ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳು ಎಂಬ ನಾಮಫಲಕವಿರುವ (ಕೆ.ಎ.01.ಇ.3316) ಕಾರು ಹಾಗೂ (ಕೆ.ಎ.09.ಎನ್.ಹೆಚ್.0749) ಕಾರುಗಳು ನಡುವೆ ಮಲೆ ಮಹದೇಶ್ವರ ಬೆಟ್ಟ ರಸ್ತೆಯ ಪೊನ್ನಾಚಿ ಕ್ರಾಸ್ ಎರಡನೇ ತಿರುವಿನಲ್ಲಿ ಮುಖಾಮುಖಿ ಡಿಕ್ಕಿಯಾಗಿದೆ. ಪರಿಣಾಮ ಕಾರುಗಳು ಜಖಂಗೊಂಡಿದ್ದು ಯಾವುದೇ ಪ್ರಾಣಪಾಯ ಸಂಭವಿಸಲಿಲ್ಲ ಎಂದು ಹೇಳಲಾಗಿದೆ.