ಕಳಪೆ ಗುಣಮಟ್ಟದ ಮೇವು ಪೂರೈಕೆ: ರೈತರ ಆಕ್ರೋಶ

ಗುಂಡ್ಲುಪೇಟೆ: ತಾಲ್ಲೂಕಿನಲ್ಲಿ  ತೀವ್ರ ಬರಗಾಲದ ಹಿನ್ನೆಲೆಯಲ್ಲಿ ಎಪಿಎಂಸಿ ಆವರಣದಲ್ಲಿ ಜಿಲ್ಲಾಡಳಿತದಿಂದ ಮೇವು ವಿತರಣೆ ಮಾಡಲಾಯಿತು.

ತಾಲೂಕಿನಲ್ಲಿ ಮೇವಿನ ಕೊರತೆಯಿಂದಾಗಿ ಬಳ್ಳಾರಿ ಕಡೆಯಿಂದ ಮೇವನ್ನು ತರಿಸಲಾಗಿದ್ದು ಗುಂಡ್ಲುಪೇಟೆ ತಾಲೂಕಿನ  ಎಪಿಎಂಸಿ ಆವರಣದಲ್ಲಿ ರೈತರಿಗೆ ರಿಯಾಯಿತಿ ದರದಲ್ಲಿ ಒಣ ಮೇವು ಹುಲ್ಲನ್ನು ವಿತರಿಸಲಾಗಿದೆ.

ತಾಲೂಕಿನಾದ್ಯಂತ ರೈತರಿಗೆ ಕೆಜಿಗೆ ಎರಡು ರೂ.ನಂತೆ ಒಬ್ಬ ರೈತನಿಗೆ 5 ರಾಶಿಗಳಿಗೆ ಐದು ದಿನಕ್ಕೆ ಆಗುವಷ್ಟು ಮೇವನ್ನು  ವಿತರಿಸಲಾಯಿತು ಅಲ್ಲದೆ, ಒಟ್ಟಾರೆ 211 ರೈತರಿಗೆ ಮೇವನ್ನು 11000 ಕೆಜಿ  ಒಣ ಮೇವನ್ನು ವಿತರಿಸಲಾಯಿತು ಎಂದು ಡಾಕ್ಟರ್ ಬಿ ಎಚ್ ಮೋಹನ್ ಕುಮಾರ್ ತಿಳಿಸಿದ್ದಾರೆ.

ಆದರೆ ಮೇವು ಪಡೆದ ರೈತರು ಒಣಗಿರುವ ಮತ್ತು ಯಾವುದೇ ಸತ್ವವಿಲ್ಲದ ಕಳಪೆ ಗುಣಮಟ್ಟದ ವಿತರಿಸುತ್ತಿದ್ದಾರೆ  ಎಂದು ಜಿಲ್ಲಾಡಳಿತದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.  ಜಾನುವಾರುಗಳು ತಿನ್ನಲು ಯೋಗ್ಯವಲ್ಲದ ಮೇವನ್ನು ಟೆಂಡರ್ ದಾರ ಪೂರೈಕೆ ಮಾಡುತಿದ್ದು ಕಸ ಮತ್ತು ಸಗಣಿ ಮಿಶ್ರಿತ ಕಬ್ಬಿನ ಒಣ ಸಿಪ್ಪೆಯನ್ನು ನೀಡುತಿದ್ದಾರೆ ಎಂದು ಆರೋಪಿಸಿದರಲ್ಲದೆ, ಹೊಸದಾಗಿ ಉತ್ತಮ ಗುಣಮಟ್ಟದ ಭತ್ತದ ಹುಲ್ಲಿನ ಮೇವನ್ನು ವಿತರಿಸುವಂತೆ ಪಶು ಇಲಾಖೆಯ ಸಹಾಯಕ ನಿರ್ದೇಶಕ ಮೋಹನ್ ಕುಮಾರ್ ಅವರನ್ನು  ಜಿಲ್ಲಾಧ್ಯಕ್ಷ ಶಾಂತಮಲ್ಲಪ್ಪ, ಮಹೇಂದ್ರ ಒತ್ತಾಯಿಸಿದರು.

ರೈತರು ಈ ಮೇವಿನಲ್ಲಿ ಯಾವುದೇ ಸತ್ವವಿಲ್ಲ ಎಂದು ಹೇಳಿ ಜಾನುವಾರುಗಳ ಆರೋಗ್ಯದ ಹಿತದೃಷ್ಟಿಯಿಂದ ಮೇವನ್ನು  ಪಡೆಯಲು ನಿರಾಕರಿಸಿದ್ದಾರೆ ಆದ್ದರಿಂದ ಬುಧವಾರ ಉತ್ತಮ ಮಟ್ಟದ ಬೇರೆ ಮೇವನ್ನು ಪೂರೈಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪಶು ವೈದ್ಯಾಧಿಕಾರಿ ಮೋಹನ್ ಕುಮಾರ್ ತಿಳಿಸಿದ್ದಾರೆ.

Ashika S

Recent Posts

ರೊನಿ ಅರುಣ್ ಬರೆದ ಲೇಖನಗಳ ಸಂಗ್ರಹ ʻರಿಕ್ಷಾ ಡೈರಿʼ ಲೋಕಾರ್ಪಣೆ

ಮಾಂಡ್ ಸೊಭಾಣ್ ಪ್ರಕಾಶನದ 22 ನೇ ಪುಸ್ತಕ ರೊನಿ ಅರುಣ್ ಬರೆದ ಲೇಖನಗಳ ಸಂಗ್ರಹ ʻರಿಕ್ಷಾ ಡೈರಿʼ ಉಲ್ಲಾಳ ಸೋಮೇಶ್ವರದಲ್ಲಿರುವ…

3 mins ago

ʼಮೋದಿ ಸರ್ಕಾರವನ್ನು ಸೋಲಿಸದಿದ್ದರೆ ಕರಾಳ ದಿನಗಳನ್ನ ಎದುರಿಸಬೇಕಾಗುತ್ತದೆʼ

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೋದಿ ಸರ್ಕಾರವನ್ನು ಸೋಲಿಸದಿದ್ದರೆ ಮುಂದಿನ ದಿನಗಳಲ್ಲಿ ದೇಶವು ಕರಾಳ ದಿನಗಳನ್ನು ನೋಡಬೇಕಾಗಬಹುದು ಎಂದು ಶಿವಸೇನಾ…

10 mins ago

ವಕೀಲ ಬಾಬಶೆಟ್ಟಿ ಹತ್ಯೆಗೆ 5 ಲಕ್ಷ ಸುಪಾರಿ: ಪ್ರಮುಖ ಆರೋಪಿ ಬಂಧನ

ಐದು ಲಕ್ಷ ರೂಪಾಯಿಗೆ ಸುಪಾರಿ ಕೊಟ್ಟು, ವಕೀಲನ ಹತ್ಯೆಗೆ ಸಂಚು ರೂಪಿಸಿದ್ದ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಬೀದರ್‌ ಜಿಲ್ಲಾ ಪೊಲೀಸರು…

22 mins ago

ದೇಶಾದ್ಯಂತ 24 ಗಂಟೆ ವಿದ್ಯುತ್‌ ಪೂರೈಕೆ ಸೇರಿ 10 ಗ್ಯಾರಂಟಿ ಘೋಷಿಸಿದ ಕೇಜ್ರಿವಾಲ್

2024ರ ಲೋಕಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಗೆದ್ದರೆ ಹತ್ತು ಗ್ಯಾರಂಟಿಗಳನ್ನು ಜಾರಿಗೊಳಿಸಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌…

28 mins ago

ಬೀದರ್‌: ಬಿಸಿ ದೋಸೆಯಂತೆ ಮಾರಾಟವಾಗುತ್ತಿದೆ ಎಸಿ, ಕೂಲರ್‌

ಬಿಸಿಲು ಹಾಗೂ ಅದರ ಝಳದಿಂದ ಜನ ಒಂದೆಡೆ ತೀವ್ರ ಅನಾರೋಗ್ಯದ ಸಮಸ್ಯೆ ಎದುರಿಸುತ್ತಿದ್ದರೆ, ಏರ್‌ ಕಂಡಿಷನರ್‌ (ಎಸಿ), ಏರ್‌ ಕೂಲರ್‌ಗಳ…

43 mins ago

ಪರಿಷತ್ ಚುನಾವಣೆಯಲ್ಲೂ ಜೆಡಿಎಸ್ ಜತೆ ಮೈತ್ರಿ ಮುಂದುವರಿಕೆ: ಬಿ.ಎಸ್.ಯಡಿಯೂರಪ್ಪ

ಮುಂಬರುವ ವಿಧಾನಪರಿಷತ್ ಚುನಾವಣೆಯಲ್ಲೂ ಜೆಡಿಎಸ್-ಬಿಜೆಪಿಮೈತ್ರಿ ಮುಂದುವರಿಯಲಿದ್ದು, ಮೈತ್ರಿಗೆ ಯಾವುದೇ ಭಂಗ ಆಗುವುದಿಲ್ಲ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ…

59 mins ago