ಚಾಮರಾಜನಗರ: ಮತಯಾಚನೆಗಿಳಿದ ಹನೂರು ಜೆಡಿಎಸ್ ಅಭ್ಯರ್ಥಿ

ಚಾಮರಾಜನಗರ: ಹನೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂ.ಆರ್. ಮಂಜುನಾಥ್ ಅವರು ಈಗಾಗಲೇ ಮತಯಾಚನೆಗೆ ಇಳಿದಿದ್ದು, ಕ್ಷೇತ್ರದಾದ್ಯಂತ ಸುತ್ತಾಡಿ ಜನರ ಬಳಿ ಮತಯಾಚಿಸುತ್ತಿರುವುದು ಎದ್ದು ಕಾಣಿಸುತ್ತಿದೆ.

ಈ ನಡುವೆ ಮಾತನಾಡಿದ ಅವರು ಕ್ಷೇತ್ರದ ಯಾವುದೇ ಮೂಲೆಗೆ ಹೋದರೂ ಸಮಸ್ಯೆಗಳ ಸರಮಾಲೆ ಕೇಳಿ ಬರುತ್ತಿವೆ. ಜನರು ಬದುಕಲು ಬೇಕಾದ ಕನಿಷ್ಠ ಮೂಲಭೂತ ಸೌಕರ್ಯಗಳು ಸಿಗದಂತಹ ಪರಿಸ್ಥಿತಿಯಲ್ಲಿದ್ದು, ಕ್ಷೇತ್ರದ ಅಭಿವದ್ಧಿಗಾಗಿ ನಂಗೊಂದು ಅವಕಾಶ ಕೊಡಿ ಎಂದು ಮನವಿ ಮಾಡಿದರು.

ಕ್ಷೇತ್ರ ವ್ಯಾಪ್ತಿಯ ಕರಿಯನಪುರ ಗ್ರಾಮದಲ್ಲಿ ಯೋಜಿಸಿದ್ದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಮಾಜಿ ಮುಖ್ಯಮಂತ್ರಿಗಳಾದ ಎಚ್ ಡಿ ಕುಮಾರಸ್ವಾಮಿ ರವರು ಬಡವರ ಪರ ಕಾಳಜಿವುಳ್ಳವರಾಗಿದ್ದು, ರೈತರ ಸಾಲ ಮನ್ನಾ ಮತ್ತು ಜನಪರ ಯೋಜನೆಗಳ ಕನಸನ್ನು ಹೊಂದಿರುವ ಜೆಡಿಎಸ್ ಪಕ್ಷವನ್ನು ನಾವೆಲ್ಲರೂ ಸೇರಿ ಬಲಪಡಿಸಬೇಕಾದ ಮತ್ತು ಪಕ್ಷವನ್ನು ಅಧಿಕಾರಕ್ಕೆ ತರುವ ಅಗತ್ಯ ಮತ್ತು ಅನಿವಾರ್ಯ ನಮಗಿದೆ.

ಹನೂರು ವಿಧಾನಸಭಾ ಕ್ಷೇತ್ರದ ಪ್ರತಿಯೊಂದು ಹಳ್ಳಿಗಳಲ್ಲಿಯೂ ಸಂಚಾರ ಮಾಡಿ ಆ ಹಳ್ಳಿಗಳ ಸಮಸ್ಯೆಗಳೇನು ಮತ್ತು ಜನರ ಅಗತ್ಯಗಳೇನು ಎಂಬುದನ್ನು ಅರಿತುಕೊಂಡಿದ್ದೇನೆ. ಅದಕ್ಕೆ ಪೂರಕವಾಗಿ ಕ್ಷೇತ್ರದ ಜನತೆಗೆ ಒಂದಿಷ್ಟು ಅಳಿಲು ಸೇವೆ ಮಾಡುತ್ತಿದ್ದೇನೆ. ರಾಜಕೀಯ ಅಧಿಕಾರ ಮತ್ತು ಸ್ಥಾನಮಾನಗಳು ಲಭಿಸಿದರೆ ಸಂಪೂರ್ಣವಾಗಿ ನಿಮ್ಮ ಸೇವೆಮಾಡಲು ಮಾಡಲು ಮುಂದೆ ಬರುವ ಚುನಾವಣೆಯಲ್ಲಿ ನನಗೊಂದು ಅವಕಾಶ ನೀಡಿ ಎಂದು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಗ್ರಾಮದ ಹಲವು ಯುವ ಮುಖಂಡರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.

ಜೆಡಿಎಸ್ ಮುಖಂಡರಾದ ಶಿವಮೂರ್ತಿ, ಮಂಜೇಶ್, ಗೋಪಾಲ್ ನಾಯ್ಕ, ಹನೂರು ಗೋವಿಂದ, ನಿಂಗಶೆಟ್ಟಿ, ಮಹಾದೇವ, ಕರಿಯನಪುರ ಗ್ರಾಮದ ಕೆ.ರಾಜು, ಕುಮಾರ ಹಾಗೂ ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರು ಹಾಜರಿದ್ದರು.

Sneha Gowda

Recent Posts

ವಿಜೃಂಭಣೆಯಿಂದ ಜರುಗಿದ ಶ್ರೀ ಅವಿಜ್ಞ ಸಾಯಿಬಾಬಾ ಪ್ರತಿಷ್ಠಾಪನಾ ಮಹೋತ್ಸವ

ವರುಣ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲ್ಲೂಕಿನ ಬಿಳಿಗೆರೆ ಹೋಬಳಿಯ ಸರಗೂರು ಗ್ರಾಮದಲ್ಲಿ ಶ್ರೀ ಅವಿಜ್ಞ ಸಾಯಿ ಕ್ಷೇತ್ರದಲ್ಲಿ ಶ್ರೀ ಅವಿಜ್ಞ…

55 mins ago

ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬೋಟ್ ಪಲ್ಟಿ: 40 ಜನರ ರಕ್ಷಣೆ

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ತದಡಿ ಗ್ರಾಮದ ಮೂಡಂಗಿಯ ಸಮೀಪ  ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬೋಟ್ ಪಲ್ಟಿಯಾದ ಘಟನೆ ನಡೆದಿದೆ. 

1 hour ago

ಮೋದಿಗೆ ಯಾರೂ ಮತ ಹಾಕಬೇಡಿ ಎಂದಿದ್ದ ಶಿಕ್ಷಕ ಅರೆಸ್ಟ್

ಬಿಹಾರದ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ಮೋದಿಗೆ ಯಾರೂ ಮತ ಹಾಕಬೇಡಿ ಎಂದು ಮಕ್ಕಳಿಗೆ ಹೇಳಿದ್ದಕ್ಕೆ ಶಿಕ್ಷಕನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.

2 hours ago

ಮೇ 24ರಿಂದ ಮೈಸೂರಿನಲ್ಲಿ ಮಾವು, ಹಲಸು ಮೇಳ

ಪ್ರತಿವರ್ಷದಂತೆ ಈ ಬಾರಿಯೂ ಮೈಸೂರು ನಗರದಲ್ಲಿ  ಒಂದೇ ಸೂರಿನಡಿ ವಿವಿಧ ಮಾವಿನ ತಳಿಯ ಹಣ್ಣು, ಹಲಸಿನ ಹಣ್ಣಿನ ರುಚಿ ಸವಿಯಲು…

2 hours ago

ಜಿಪ್​ ಲೈನ್ ತುಂಡಾಗಿ ಬಿದ್ದು ಮಹಿಳೆ ಸಾವು

ಜಿಪ್​ ಲೈನ್ ತುಂಡಾಗಿ ಬಿದ್ದು ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ  ರಾಮನಗರ ಜಿಲ್ಲೆಯ ಹಾರೋಹಳ್ಳಿಯ ಜಂಗಲ್ ಟ್ರಯಲ್ಸ್ ರೆಸಾರ್ಟ್​ನಲ್ಲಿ ನಡೆದಿದೆ. 

2 hours ago

ಮೀನು ಹಿಡಿಯಲು ಹೋದ ಒಂದೇ ಕುಟುಂಬದ ಇಬ್ಬರು ಕೆರೆಯಲ್ಲಿ ಮುಳುಗಿ ಮೃತ್ಯು

ಮೀನು ಹಿಡಿಯಲು ಹೋದ ಒಂದೇ ಕುಟುಂಬದ ಇಬ್ಬರು ಸದ್ಯಸರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಶಿರ್ಲಾಲು ಎಂಬಲ್ಲಿ…

3 hours ago